ಬ್ರಿಸ್ಬೇನ್ : ‘ಆಸ್ಟ್ರೇಲಿಯಾ’ದಲ್ಲಿ ನಡೆಯುತ್ತಿರುವ ಜಿ.20 ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಜಿ.20 ರಾಷ್ಟ್ರಗಳ ಮುಖ್ಯಸ್ಥರನ್ನುದ್ದೇಶಿಸಿ ಮಾತನಾಡಿದ್ದು ಸುಧಾರಣೆ ಎಂಬುದು ಜನತೆಯಿಂದ ನಡೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

g-20-1

g-20-2

ತಮ್ಮ ಭಾಷಣದಲ್ಲಿ ಆರ್ಥಿಕ ಸುಧಾರಣೆಗೆ ಒತ್ತು ನೀಡಿರುವ ಪ್ರಧಾನಿ ಮೋದಿ, ಸುಧಾರಣೆ ಜನತೆಯಿಂದಲೇ ನಡೆಯಬೇಕಿರುವ ಕ್ರಿಯೆ ಅದನ್ನು ಗೌಪ್ಯವಾಗಿ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸುಧಾರಣೆ ಜನಸಾಮಾನ್ಯ ಕೇಂದ್ರಿತ ಹಾಗೂ ಜನಸಾಮಾನ್ಯ ಚಾಲಿತ ಕ್ರಿಯೆಯಾಗಿರಬೇಕು ಹಾಗೂ ರಾಜಕೀಯ ಒತ್ತಡಗಳಿಂದ ಮುಕ್ತವಾಗಿರಬೇಕು ಎಂದು ಮೋದಿ ತಿಳಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ, ಸುಧಾರಣೆಯ ಕ್ರಿಯೆ ಸರ್ಕಾರಿ ಕಾರ್ಯಕ್ರಮ ಎಂಬ ಭಾವನೆ ಮೂಡಿದೆ ಮೊದಲು ಇಂತಹ ಭಾವನೆಗಳನ್ನು ತೆಗೆದುಹಾಕಬೇಕು ಎಂದು ಮೋದಿ ಕರೆ ನೀಡಿದ್ದಾರೆ. ಯಾವುದೇ ಸುಧಾರಣೆಯಾದರೂ ಅದು ನಿರಂತರ ಪ್ರಕ್ರಿಯೆ ಎಂದಿರುವ ಮೋದಿ, ಅದನ್ನು ಸಾಂಸ್ಥಿಕಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಆಡಳಿತ ಪ್ರಕ್ರಿಯೆಯಲ್ಲೂ ಸಾಕಷ್ಟು ಸುಧಾರಣೆ ನಡೆಯಬೇಕಿದ್ದು ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸಬೇಕೆಂದು ಮೋದಿ ಹೇಳಿದ್ದಾರೆ. ಇದೇ ವೇಳೆ ವಿದೇಶದಲ್ಲಿರುವ ಭಾರತದ ಕಪ್ಪು ಹಣ ವಾಪಸ್ ಪಡೆಯಲು ಮೋದಿ ಅಂತಾರಾಷ್ಟ್ರೀಯ ಸಹಕಾರ ಕೋರಿದ್ದಾರೆ. ಜಿ.20 ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ಮೋದಿ ಅವರನ್ನು ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬ್ಬೋಟ್ ಆತ್ಮೀಯವಾಗಿ ಸ್ವಾಗತಿಸಿದರು.

By suddi9

Leave a Reply

Your email address will not be published. Required fields are marked *