ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮಕ್ಕೆ ಪಶು ವೈದ್ಯಾಧಿಕಾರಿ ಡಾ.ಉಮೇಶ ಕಿರಣ್ ಚಾಲನೆ
ಬಂಟ್ವಾಳ: ತಾಲ್ಲೂಕಿನ ರಾಯಿ ಪೇಟೆಯಲ್ಲಿ ಬುಧವಾರ ನಡೆದ ೧೧ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮಕ್ಕೆ ಪಶು ವೈದ್ಯಾಧಿಕಾರಿ ಡಾ.ಉಮೇಶ ಕಿರಣ್ ಚಾಲನೆ ನೀಡಿದರು.
ಸಮಿತಿ ಅಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಉದ್ಯಮಿ ತೇಜಸ್ ಕುಲಾಲ್, ಗೋಪಿನಾಥ ರೈ, ರಾಮಸುಂದರ ಗೌಡ, ಸದಾನಂದ ಶೆಟ್ಟಿ, ಜಗದೀಶ ಕೊಯಿಲ, ಸತೀಶ ಕೊಯಿಲ, ಮೋಹನ ರಾಯಿ, ಸುಧೀರ್ ಶೆಟ್ಟಿ, ಪ್ರಕಾಶ ಕುಮಾರ್ ಜೈನ್, ರುಕ್ಕಯ ಪೂಜಾರಿ, ಜಯಲಕ್ಷ್ಮಿ, ಸದಾನಂದ ಶೀತಾಳ, ನಾಗಾರಣ ಗೌಡ, ಅನಿಲ್ ಪೈ, ಹೇಮಚಂದ್ರ ಶೆಟ್ಟಿಗಾರ್, ಕೊರಗಪ್ಪ ಪೂಜಾರಿ, ಸುಂದರ ಪೂಜಾರಿ, ಸಂತೋಷ್ ಶೆಟ್ಟಿ, ಅರ್ಚಕ ನಾಗೇಶ ರಾವ್ ಮತ್ತಿತರರು ಇದ್ದರು.