ಸಿದ್ಧಕಟ್ಟೆ: ೩೫ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ರೂ ೧೫ಲಕ್ಷದ ವೆಚ್ಚದ ಬೆಳ್ಳಿ ಪ್ರಭಾವಳಿ ಸಮರ್ಪಣೆ
ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆಯಲ್ಲಿ ೩೫ ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಗಣೇಶನ ವಿಗ್ರಹಕ್ಕೆ ಬೆಳ್ಳಿ ಪ್ರಭಾವಳಿ ಸಮರ್ಪಿಸಲಾಯಿತು.

ಬಂಟ್ವಾಳ ದೇಶೀಯ ಸಂಸ್ಕೃತಿ ಉಳಿವಿಗೆ ಧಾರ್ಮಿಕ ಹಬ್ಬಗಳ ಆಚರಣೆ ಮತ್ತು ಸಂಘಟಿತ ಪ್ರಯತ್ನದಿಂದ ಧರ್ಮ ಸಂರಕ್ಷಣೆಯೂ ಸಾಧ್ಯವಾಗುತ್ತದೆ ಎಂದು ಆರ್ ಎಸ್ ಎಸ್ ದಕ್ಷಿಣ ಪ್ರಾಂತ ಸಂಘ ಚಾಲಕ ಡಾ.ವಾಮನ ಶೆಣೈ ಹೇಳಿದ್ದಾರೆ.
ಇಲ್ಲಿನ ಸಿದ್ಧಕಟ್ಟೆ ಕೇಂದ್ರ ಮೈದಾನದಲ್ಲಿ ಹಿಂದೂ ಹಿತ ರಕ್ಷಣಾ ವಿಶ್ವಸ್ಥ ಮಂಡಳಿ ಟ್ರಸ್ಟ್ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಗುರುವಾರ ನಡೆದ ೩೫ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಜರಂಗದಳ ಪ್ರಾಂತ ಸಹಸಂಚಾಲಕ ರಘು ಜಿ.ಸಕಲೇಶಪುರ ದಿಕ್ಸೂಚಿ ಭಾಷಣ ಮಾಡಿದರು. ಕ್ರಶರ್ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಡಾ.ರವೀಂದ್ರ ಶೆಟ್ಟಿ ಬಜಗೋಳಿ, ಉದ್ಯಮಿ ಮಾರಪ್ಪ ಕುಲಾಲ್ ಅಣ್ಣಳಿಕೆ, ಕೊರಗ ಸಂಘದ ಮಾಜಿ ಅಧ್ಯಕ್ಷ ಬಾಲರಾಜು, ವರ್ತಕರ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ಜಿಲ್ಲಾ ಪದ್ಮಶಾಲಿ ಮಹಾಸಭಾ ಅಧ್ಯಕ್ಷ ಜಯರಾಮ ಶೆಟ್ಟಿಗಾರ್, ಪಂಚಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ರಂಜಿತ್ ಪೂಜಾರಿ ತೋಡಾರು, ಮಂಗಲೂರು ಕಾಳಿಕಾಂಬ ದೇವಸ್ಥಾನ ಮೊಕ್ತೇಸರ ಸುಂದರ ಆಚಾರ್ಯ ಶುಭ ಹಾರೈಸಿದರು.
ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ಸಾಧಕರಾದ ಮನ್ವಿತ್ ಶೆಟ್ಟಿ, ರುಕ್ಮಯ ಗೌಡ, ಅರ್ಕಕೀರ್ತಿ ಇಂದ್ರ, ದಯಾನಂದ ಉಪ್ಪಿರ ಇವರನ್ನು ಸನ್ಮಾನಿಸಲಾಯಿತು.
ಸಮಿತಿ ಅಧ್ಯಕ್ಷ ನೋಣಯ ಶೆಟ್ಟಿಗಾರ್ ಮೊಯಿಲೊಟ್ಟು, ಗೌರವಾಧ್ಯಕ್ಷ ಜಯ ನಾಯ್ಕ್, ಅಶೋಕ್ ಸಪಲ್ಯ, ಕಾರ್ಯದರ್ಶಿ ಪದ್ಮನಾಭ ಕುದ್ಕೋಳಿಬೈಲು, ಪ್ರಮುಖರಾದ ಜಯ ಮೂಲ್ಯ ಕುದ್ಕೋಳಿ, ಗಣೇಶ ಪೂಜಾರಿ ಕಮಲಾಧರ ಶೆಟ್ಟಿಗಾರ್, ಪೂರ್ಣಿಮಚಂದ್ರ ಕರ್ಪೆ, ಮಂಜುಶ್ರೀ ದೇವಸ, ಕಮಲಾಧರ ಶೆಟ್ಟಿಗಾರ್, ಗೀತಾ ಕುದ್ಕೋಳಿಬೈಲು ಮತ್ತಿತರರು ಇದ್ದರು. ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ ಸ್ವಾಗತಿಸಿ, ಚಂದ್ರ ಪೂಜಾರಿ ಕೋರ್ಯಾರು ವಂದಿಸಿದರು. ದಿನೇಶ ಸುವರ್ಣ ನಿರೂಪಿಸಿದರು.