ಬಂಟ್ವಾಳ: ೪ರಂದು ಬಂಟರ ಸಂಘದ ವಿದ್ಯಾರ್ಥಿ ವೇತನ ವಿತರಣೆ
ಬಂಟ್ವಾಳ: ಬಂಟರ ಸಂಘದ ವತಿಯಿಂದ ಮುಂಬೈ ಆಲ್ ಕಾರ್ಗೊ ಲಾಜಿಸ್ಟಿಕ್ ಸಂಸ್ಥೆ ಸಹಯೋಗದಲ್ಲಿ ಇದೇ ೪ರಂದು ಬೆಳಿಗ್ಗೆ ಗಂಟೆ ೧೦.೩೦ಕ್ಕೆ ಬ್ರಹ್ಮರಕೂಟ್ಲು ಬಂಟರ ಭವನದಲ್ಲಿ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ನಡೆಯಲಿದೆ.
ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಮಾಜಿ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ, ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ವಿಧಾನಪರಿಷತ್ ಸದಸ್ಯ ಬಿ.ಮಂಜುನಾಥ ಭಂಡಾರಿ, ಡಾ.ನೀಲ್ ರತನ್ ಶೆಂಡೆ, ಸದಾಶಿವ ಶೆಟ್ಟಿ ಕನ್ಯಾನ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಮಾಧ್ಯಮ ಪ್ರಮುಖ್ ಗಣೇಶ ಶೆಟ್ಟಿ ಗೋಳ್ತಮಜಲು ತಿಳಿಸಿದ್ದಾರೆ.