ತುಳುನಾಡ ರಕ್ಷಣಾ ವೇದಿಕೆ ಕಛೇರಿಗೆ ಚಲನಚಿತ್ರ ನಟ ಲ್ಯಾರಿ ಫೆರ್ನಾಂಡೀಸ್ ಭೇಟಿ
ಮುಂಬಯಿ :ತುಳುನಾಡ ರಕ್ಷಣಾ ವೇದಿಕೆ ಕಛೇರಿಗೆ ಚಲನಚಿತ್ರ ನಟ ಲ್ಯಾರಿ ಫೆರ್ನಾಂಡೀಸ್ ಭೇಟಿ ನೀಡಿದ್ದು, ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಶಾಲು ಹೊದಿಸಿ ಸನ್ಮಾನಿಸಿದರು.
ನಟ ಲ್ಯಾರಿ ಫೆರ್ನಾಂಡೀಸ್ ರವರು ದುಬೈಯಲ್ಲಿ ನೆಲೆಸಿದ್ದು, ಖಾಸಗಿ ಕಾರ್ಯಕ್ರಮದ ಹಿನ್ನಲೆ ಮಂಗಳೂರಿಗೆ ಆಗಮಿಸಿದ್ದು, ಇದೇ ವೇಳೆ ತುಳುನಾಡ ರಕ್ಷಣಾ ವೇದಿಕೆ ಕಛೇರಿಗೆ ಭೇಟಿ ನೀಡಿದ್ದರು.
ಇವರು ಕಾಜಾರ್ ಕೊಂಕಣಿ ಸಿನಿಮಾ ಮತ್ತು ಎಲ್ಲೆಲ್ಲೂ ನೀನೆ ನನ್ನಲ್ಲೂ ನೀನೆ ಕನ್ನಡ ಸಿನಿಮಾ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ತುಳುನಾಡ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಡಾ. ಡೇವಿಡ್ ಫ್ರಾಂಕ್ ಫೆರ್ನಾಂಡೀಸ್ ಜೊತೆಗಿದ್ದರು.