ತುಳುನಾಡ ರಕ್ಷಣಾ ವೇದಿಕೆ : ಮುದ್ದು ಕೃಷ್ಣ ಫೋಟೋ-ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣೆ, ಸ್ವರ್ಧೆಗಳು ಪ್ರತಿಭಾನ್ವೇಷಣೆ ವೇದಿಕೆಯಾಗಿವೆ : ಡಾ| ಫ್ರಾಂಕ್ ಫೆರ್ನಾಂಡಿಸ್
ಮುಂಬಯಿ : ಸ್ವರ್ಧೆಗಳು ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಿವೆ. ಆದ್ದರಿಂದ ಸ್ಪರ್ಧೆಗಳನ್ನು ಬರೇ ಪ್ರತಿಭಾನ್ವೇಷಣೆಗಾಗಿ ಮಾತ್ರ ಆಯ್ದುಕೊಳ್ಳಬೇಕು ಎಂದು ತುಳುನಾಡ ರಕ್ಷಣಾ ವೇದಿಕೆಯ ಅಂತರ್‌ರಾಷ್ಟ್ರೀಯ ಘಟಕದ ಗೌರವಾಧ್ಯಕ್ಷ ಡಾ| ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ತಿಳಿಸಿದರು.
ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದು ಕೃಷ್ಣ ಅನ್ಲೈನ್ ಫೋಟೋ ಸ್ಪರ್ಧೆ ಹಾಗೂ ಗಣೇಶೋತ್ಸವದ ಅಂಗವಾಗಿ ಮಕ್ಕಳ ಚಿತ್ರಕಲಾ ಸ್ಪರ್ಧೆಯ ಚಿತ್ರಕಲಾ ವಿಜೇತ ಸ್ಪರ್ಧಾಳುಗಳ ಬಹುಮಾನ ವಿತರಣಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಡಾ| ಫ್ರಾಂಕ್ ಫೆರ್ನಾಂಡಿಸ್ ತಿಳಿಸಿದರು.
ಕಳೆದ ಭಾನುವಾರ ಮಂಗಳೂರು ಇಲ್ಲಿನ ತುಳು ಸಾಹಿತ್ಯ ಅಕಾಡೆಮಿ ಭವನದ ಸಿರಿ ಚಾವಡಿ ಸಭಾಂಗಣದಲ್ಲಿ ತುರವೇ ಸ್ಥಾಪಕಾಧ್ಯಕ್ಷ ಯೋಗೀಶ್ ಜೆ.ಶೆಟ್ಟಿ ಜಪುö್ಪ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಿಕಲ ಚೇತನರಾದ ವಿವೇಕ್ ಅವರ ದಿವ್ಯ ಹಸ್ತದಿಂದ ಸ್ಪರ್ಧಾಳುಗಳಿಗೆ ಡ್ರಾಯಿಂಗ್ ಶೀಟುಗಳನ್ನು ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಂಗಳೂರು ನಗರ ಮಹಿಳಾ ಠಾಣೆ ಉಪ ನಿರೀಕ್ಷಕಾದ ಶ್ರೀಕಲಾ, ರಾಧಿಕಾ ಸಿ.ಹೆಚ್, ಜ್ಯೋತಿಕಾ ಜೈನ್, ವಿವೇಕಾನಂದ ರಾವ್, ಆಶಾ ಶೆಟ್ಟಿ ಅತ್ತಾವರ, ಗೀತಾ ಶೆಟ್ಟಿ ಪಡೀಲ್, ಚಿತ್ರ ನಿರ್ಮಾಪಕ ಮಹೇಂದ್ರ ಕುಮಾರ್, ಪ್ರಸಾದ್ ಕುಂಚಾಡಿ, ಹರೀಶ್ ಶೆಟ್ಟಿ, ಪೇರಿ ಡಿಸೋಜ, ಹರ್ಷಿತಾ, ಆಶೀಶ್ ಅಂಚನ್, ರೋಶನ್ ಡಿಸೋಜ, ಗೈಟನ್ ರೋಡ್ರಿಗಸ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಆರ್ವಿ ಎಂ.ಆಚಾರ್ಯ (ಪ್ರಥಮ), ಸಾಯನ್ ಪಿ.ಸುವರ್ಣ (ದ್ವಿತೀಯ), ಚಾಯಾಂಕ್ ದೀರಜ್ (ತೃತೀಯ), ಆಸ್ತ ಮಂಗಳೂರು (ಚತುರ್ಥ) ಸ್ಥಾನಗಳಿಂದ ವಿಜೇತರಾಗಿದ್ದು, ಚಿತ್ರಕಲಾ ಸ್ಪರ್ಧೆಯಲ್ಲಿ ರುತ್ವಾ ಹೆಚ್.ಪಿ, ಸ್ತುತಿ ಕಾರ್ಕಳ, ಪೂರ್ವಿಕ್ ಸಾಲ್ಯಾನ್ ಈ ಮೂವರು ಪುಟಾಣಿಗಳು ವಿಜೇತರಾಗಿದ್ದು, ಅಂತೆಯೇ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ೩೩ ಸ್ಪರ್ಧಿಗಳಿಗೆ ಬಹುಮಾನ ಉಳಿದ ೩೦ ಮಕ್ಕಳಿಗೆ ಪ್ರಸಂಶನಾ ಪತ್ರ ನೀಡಿ ಗೌರವಿಸಲಾಯಿತು.
ಸ್ಪರ್ಧೆಯಲ್ಲಿ ಸುಮಾರು ೧ ಲಕ್ಷದ ೩೬ ಸಾವಿರ ಜನರು ಲೈಕ್ಸ್, ಶೇರ್, ಕಮೆಂಟ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಬೆಂಬಲ ನೀಡಿರುವುದಕ್ಕೆ ಯೋಗೇಶ್ ಶೆಟ್ಟಿ ಹರ್ಷ ವ್ಯಕ್ತ ಪಡಿಸಿದ್ದಾರೆ. ಪ್ರಶಾಂತ್ ಭಟ್ ಕಡಬ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.