ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆ : ಚಿನ್ನದ ಪದಕ ಮುಡಿಗೇರಿಸಿದ ಅಭಯ ಎಸ್.ಪೂಜಾರಿ
ಮುಂಬಯಿ: ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆ, ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರೂ ಯುವ ಕೇಂದ್ರ ಶಿವಮೊಗ್ಗ ಸಂಸ್ಥೆಗಳು ಜಂಟಿ ಆಶ್ರಯದಲ್ಲಿ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ದ್ವಿದಿನಗಳ ೩ನೇ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ಇಲ್ಲಿನ ನಿರ್ಮಲಾ ಶಾಲಾ ವಿದ್ಯಾರ್ಥಿ ಮಾ| ಅಭಯ ಎಸ್.ಪೂಜಾರಿ ಚಿನ್ನದ ಪದಕ ವಿಜೇತನಾಗಿರುವನು.

ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ೨೦೨೨ರ ಕಟಾ ಮತ್ತು ಕುಮಿಟಿಯಲ್ಲಿ ಪ್ರಥಮ ಸ್ಥಾನದಲ್ಲಿ ಸ್ವರ್ಣ ಪದಕ ಮುಡಿಗೇರಿಸಿರುವ ಅಭಯ ಪೂಜಾರಿ,ಉಪ್ಪೂರು ಸುಧಾಕರ ಪೂಜಾರಿ ಮತ್ತು ದೀಪಾ ದಂಪತಿ ಸುಪುತ್ರನಾಗಿದ್ದು ಬ್ರಹ್ಮಾವರ ನಿರ್ಮಲಾ ಆಂಗ್ಲ ಮಾಧ್ಯಮ ಶಾಲೆಯ ೫ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿ ಹಾಗೂ ರೇಂಷಿ ವಾಮನ ಪಾಲನ್ ಇವರ ಶಿಷ್ಯನಾಗಿದ್ದಾನೆ.

ಅಭಯನಿಗೆ ಭವಿಷತ್ತಿನಲ್ಲಿ ಇನ್ನೂ ಹೆಚ್ಚಿನ ಪ್ರಶಸ್ತಿ ಪುರಸ್ಕಾರಗಳು ಪ್ರಾಪ್ತಿಯಗಲಿ ಎಂದು ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಇದರ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಗೌ| ಪ್ರ| ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ ಮತ್ತಿತರ ಪದಾಧಿಕಾರಿಗಳು, ಸದಸ್ಯರು ಶುಭಹಾರೈಸಿದ್ದಾರೆ.