ತಮಿಳುನಾಡಿನಲ್ಲಿ ಅಪಘಾತ: ಬಿ.ಸಿ.ರೋಡ್ ವ್ಯಕ್ತಿ ಸಾವು
ಬಂಟ್ವಾಳ: ತಮಿಳುನಾಡಿನ ಅಂಬೂರ್ ಎಂಬಲ್ಲಿ ಶುಕ್ರವಾರ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಬಿ.ಸಿ.ರೋಡ್ ಸಮೀಪದ ತಲಪಾಡಿ ನಿವಾಸಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರರನ್ನು ಇಲ್ಲಿನ ತಲಪಾಡಿ ನಿವಾಸಿ ಮುಹಮ್ಮದ್ ಇರ್ಷಾದ್ (೩೭) ಎಂದು ಗುರುತಿಸಲಾಗಿದ್ದು, ಮಂಗಳೂರು ಬಂದರಿನಿಂದ ಲಾರಿಯಲ್ಲಿ ಮೀನು ತುಂಬಿಸಿ ಶುಕ್ರವಾರ ಮಧ್ಯಾಹ್ನ ಮನೆಯಿಂದ ಹೊರಟಿದ್ದರು. ಈ ಲಾರಿಯನ್ನು ಬಿ.ಸಿ.ರೋಡ್ ಸಮೀಪದ ಪಲ್ಲಮಜಲು ನಿವಾಸಿ ಅಬ್ದುಲ್ ಅಝೀಝ್ ಎಂಬವರು ಲಾರಿ ಚಲಾಯಿಸುತ್ತಿದ್ದು, ಮೃತರು ನಿದ್ರಿಸುತ್ತಿದ್ದರು. ಇದೇ ವೇಳೆ ಬೇರೊಂದು ಲಾರಿ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ. ಮೃತರಿಗೆ ತಾಯಿ, ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.