ಬಂಟ್ವಾಳ: ಸಿಪಿಐ ೨೪ನೇ ಜಿಲ್ಲಾ ಸಮ್ಮೇಳನಕ್ಕೆ ಚಾಲನೆ
ಬಂಟ್ವಾಳ: ಭಾರತೀಯ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ವತಿಯಿಂದ ಆ.27ರಂದು ಶನಿವಾರ ಆರಂಭಗೊಂಡ ೨೪ನೇ ಜಿಲ್ಲಾ ಸಮ್ಮೇಳನಕ್ಕೆ ಸಿಪಿಐ ಹಿರಿಯ ಮುಖಂಡ ಎ.ಪ್ರಭಾಕರ ರಾವ್ ಧ್ವಜಾರೋಹಣ ನೆರವೇರಿಸಿದರು. ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಇದ್ದಾರೆ.
ಬಂಟ್ವಾಳದಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ವತಿಯಿಂದ ೩ ದಿನಗಳು ನಡೆಯಲಿರುವ ಅವಿಭಜಿತ ಜಿಲ್ಲಾ ೨೪ನೇ ಸಮ್ಮೇಳನಕ್ಕೆ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಚಾಲನೆ ನೀಡಿದರು. ಸಿಪಿಐ ಹಿರಿಯ ಮುಖಂಡ ಎ.ಪ್ರಭಾಕರ ರಾವ್ ಧ್ವಜಾರೋಹಣ ನೆರವೇರಿಸಿದರು.
ಮೂರು ದಿನಗಳ ಕಾಲ ನಡೆಯಲಿರುವ ಸಮ್ಮೇಳನದ ಧ್ವಜಾರೋಹನವನ್ನು ಹಿರಿಯ ಸಿಪಿಐ ಮುಖಂಡ ಎ.ಪ್ರಭಾಕರ ರಾವ್ ನೆರವೇರಿಸಿದರು. ಬಳಿಕ ನಡೆದ ಪ್ರತಿನಿಧಿ ಸಮಾವೇಶವನ್ನು ಸಿಪಿಐ ರಾಜ್ಯ ಕಾರ್ಯದರ್ಶಿ ಕಾ. ಸಾತಿ ಸುಂದರೇಶ್ ಉದ್ಘಾಟಿಸಿ ಮಾತನಾಡಿದರು.
ಪ್ರಮುಖರಾದ ಪ್ರೇಮನಾಥ ಕೆ., ರತಿ ಎಸ್. ಭಂಡಾರಿ, ಎಂ.ಪಿ.ರಾವ್, ಅವಿಭಜಿತ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಜಿಲ್ಲಾ ಸಹ ಕಾರ್ಯದರ್ಶಿ ವಿ.ಸೀತಾರಾಮ್, ಸಿಪಿಐ ರಾಜ್ಯ ಮಂಡಳಿ ಸದಸ್ಯ ಬಿ.ಶೇಖರ್, ಸಿಪಿಐ ಮಂಗಳೂರು ಕಾರ್ಯದರ್ಶಿ ಎಂ.ಕರುಣಾಕರ್, ಭಾರತೀಯ ರಾಜ್ಯ ಮಹಿಳಾ ಒಕ್ಕೂಟ ಕಾರ್ಯದರ್ಶಿ ಭಾರತಿ ಪ್ರಶಾಂತ್, ಸಮ್ಮೇಳನದ ಪೂರ್ವ ಸಿದ್ಧತಾ ಸಮಿತಿ ಸಂಚಾಲಕ ಬಿ.ಬಾಬು ಭಂಡಾರಿ ಇದ್ದರು. ಬಂಟ್ವಾಳ ಸಿಪಿಐ ಕಾರ್ಯದರ್ಶಿ ಸುರೇಶ್ ಕುಮಾರ್ ಸ್ವಾಗತಿಸಿ, ವಂದಿಸಿದರು.