ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮ, ಮುಕ್ತ ವಾಲಿಬಾಲ್ ಪಂದ್ಯಾಟದಲ್ಲಿ ತೌಡುಗೋಳಿಯ ನರಿಂಗಾನ ಯುವಕ ಮಂಡಲಕ್ಕೆ ಪ್ರಶಸ್ತಿ
ವರ್ಕಾಡಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಸ್ನೇಹ ಫ್ರೆಂಡ್ಸ್ ವರ್ಕಾಡಿ ಸುಂಕದಕಟ್ಟೆ ಬೇಕರಿ ಕ್ರೀಡಾಂಗಣದಲ್ಲಿ ಆಯೋಜಿಸಿದ ಮುಕ್ತ ವಾಲಿಬಾಲ್ ಪಂದ್ಯಾಟದಲ್ಲಿ ತೌಡುಗೋಳಿಯ ಯುವಕ ಮಂಡಲ ನರಿಂಗಾನ ತಂಡ ಪ್ರಥಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು ಬಿಎಫ್ ಸಿ ಬೀರಿ ತಂಡ ದ್ವಿತೀಯ ಪ್ರಶಸ್ತಿಗೆ ತೃಪ್ತಿ ಪಡೆಯಿತು.
ಬೇಕರಿ ಸಮೀಪದ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದ ಫೈನಲ್ ನಲ್ಲಿ ಯುವಕ ಮಂಡಲ ನರಿಂಗಾನ ತಂಡ ಬೀರಿ ತಂಡವನ್ನು ಮಣಿಸಿತು. ಯುವಕ ಯುವಕ ಮಂಡಲ ನರಿಂಗಾನ ತಂಡದ ನವೀದ್ ಅತ್ಯುತ್ತಮ ಹೊಡೆತಗಾರ ಹಾಗೂ ರಾಕೇಶ್ ಅತ್ಯುತ್ತಮ ಎತ್ತುಗೆಗಾರ ಪ್ರಶಸ್ತಿ ಪಡೆದರೆ ಬಿಎಫ್ ಸಿ ತಂಡದ ರಾಕೇಶ್ ಆಲ್ ರೌಂಡರ್ ಪ್ರಶಸ್ತಿ ಪಡೆದರು. ಕೂಟದಲ್ಲಿ 20ತಂಡಗಳು ಭಾಗವಹಿಸಿತ್ತು.
ನರಿಂಗಾನ ತಂಡ ಪ್ರಥಮ ನಗದು 5000 ರೂ. ಹಾಗೂ ಶಾಶ್ವತ ಫಲಕ, ಬೀರಿ ತಂಡ ದ್ವಿತೀಯ ನಗದು ರೂ. 3000 ಹಾಗೂ ಶಾಶ್ವತ ಫಲಕ, ಎನ್ ಎಂ ಸಿ ಕುಂಜತ್ತೂರು ತೃತೀಯ ಪ್ರಶಸ್ತಿ ಶಾಶ್ವತ ಫಲಕ ಹಾಗೂ ಬ್ರದರ್ಸ್ ಪಚ್ಚೋಡಿ ಚತುರ್ಥ ಪ್ರಶಸ್ತಿಯಾಗಿ ಶಾಶ್ವತ ಫಲಕ ಪಡೆಯಿತು.
ಸಮಾರೋಪದಲ್ಲಿ ಚರಣ್ ರಾಜ್, ಗೋಪಿಕ್ ಪರಿವಾರ್, ವಸಂತ ಎಸ್, ರಾಜೇಶ್ ಡಿಸೋಜ, ದಿನೇಶ್ ಶೆಟ್ಟಿಗಾರ್, ಆನಂದ್ ತಚ್ಚಿರೆ, ಗಣೇಶ್ ಎಂ, ಸಂಪತ್, ರವಿ ಭಾಗವಹಿಸಿದ್ದು ವಿಜೇತರಿಗೆ ಬಹುಮಾನವಿತರಿಸಿದರು.
ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯಿ, ಖ್ಯಾತ ವಾಲಿಬಾಲ್ ಆಟಗಾರ ನಿಖಿಲ್ ಆಳ್ವ ಗರೋಡಿ, ನರಿಂಗಾನ ಯುವಕ ಮಂಡಲದ ಅಧ್ಯಕ್ಷ ಜೀತೇಶ್ ಶೆಟ್ಟಿ ಪೂಂಜರ ಮನೆ, ಪ್ರಧಾನ ಕಾರ್ಯದರ್ಶಿ ಪುನೀತ್ ಶೆಟ್ಟಿ ಪುಳಿಂಕೆತ್ತಡಿ ಕ್ರೀಡಾ ಕಾರ್ಯದರ್ಶಿ ವಿಜಯ್ ಪೂಜಾರಿ ಆರ್. ಸರ್ಕುಡೇಲು, ಸಾಂಸ್ಕೃತಿಕ ಕಾರ್ಯದರ್ಶಿ ಪ್ರಜ್ವಲ್ , ಇಬ್ರಾಹಿಂ ಶಾಂತಿಪಳಿಕೆ, ನರಿಂಗಾನ ಯುವಕ ಮಂಡಲದ ಮಾಜಿ ಅಧ್ಯಕ್ಷರುಗಳಾದ ಚಂದ್ರಹಾಸ್ ಎಲ್. ಸರ್ಕುಡೇಲು, ವಿಜಯ್ ಎಲ್. ಸರ್ಕುಡೇಲು, ಮುರಲೀಧರ ಶೆಟ್ಟಿ ಮೋರ್ಲ , ಶೇಖಬ್ಬ ನಿಡ್ಮಾಡ್, ರಾಕೇಶ್ ಕೊರಕಟ್ಟ, ಅವಿನಾಶ್ ಸರ್ಕುಡೇಲು, ರಾಜೀವ ಎಸ್. ಶಾಂತಿಪಳಿಕೆ, ಸತೀಶ್ ಮಲಿ, ಪರಶು ಆಳ್ಬರಬೆಟ್ಟು, ಅಮರನಾಥ ಮುಡೂರು, ನಿತಿನ್ ನಿಡ್ಮಾಡ್, ರಕ್ಷಿತ್ ನಿಡ್ಮಾಡ್, ಮುರಲೀ ತಿಮರಕೋಡಿ, ಶ್ರೀಕುಮಾರ್ ಸರ್ಕುಡೇಲು, ದೀಪ್ ರಾಜ್ ತೌಡುಗೋಳಿ, ಶ್ರವಣ್ ಸರ್ಕುಡೇಲು, ಜೀತು ಮರ್ಚೋಡಿ, ತಿಲಕ್ ಮರ್ಚೋಡಿ, ಕೌಶಿಕ್ ತೌಡುಗೋಳಿ, ಶಿವು ಶಾಂತಿಪಳಿಕೆ, ರಮೇಶ್ ಶಾಂತಿಪಳಿಕೆ, ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು.
ವಿಜಯೋತ್ಸವ: ಪ್ರಥಮ ಪ್ರಶಸ್ತಿ ಪಡೆದ ಖುಷಿಯಲ್ಲಿ ನರಿಂಗಾನ ಯುವಕ ಮಂಡಲದ ಸದಸ್ಯರು ಹಾಗೂ ಅಭಿಮಾನಿಗಳು ಸುಂಕದಕಟ್ಟೆ ಬೇಕರಿಯಿಂದ ವರ್ಕಾಡಿ ದೇವಸ್ಥಾನ ರಸ್ತೆಯಾಗಿ ತೌಡುಗೋಳಿ ಜಂಕ್ಷನ್, ಮೋರ್ಲ ಕ್ರಾಸ್, ತೌಡುಗೋಳಿ ಕ್ರಾಸ್ , ಕೊರಕಟ್ಟ, ಗರೋಡಿ, ನಿಡ್ಮಾಡ್, ಮರ್ಚೋಡಿ, ತೌಡುಗೋಳಿ ಅಂಗನವಾಡಿ ರಸ್ತೆಯಲ್ಲಿ ಟ್ರೋಫಿ ಜತೆಗೆ ಬೈಕ್ ರ್‍ಯಾಲಿ ನಡೆಸಿ ಯುವಕ ಮಂಡಲ ನರಿಂಗಾನಕ್ಕೆ ಜೈಕಾರ ಕೂಗಿ ಸಂಭ್ರಮಿಸಿದರು.