ಸಾಣೂರುಪದವಿನಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ
ಕೈಕಂಬ: ೭೫ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಅಂಗವಾಗಿ ಶ್ರೀ ಧರ್ಮಶಾಸ್ತ ಭಜನಾ ಮಂಡಳಿ ವತಿಯಿಂದ ಸರಿಯಾಗಿ ೯ಗಂಟೆಗೆ ಸಭಾಧ್ಯಕ್ಷರಾದ ಶಿವಪ್ರಸಾದ್ ಸೊಲ್ತಾಡಿ ಇವರಿಂದ ಧ್ವಜಾರೋಹಣ ಮಾಡಲಾಯಿತು. ನಂತರ ಸಭಾ ಕಾರ್ಯಕ್ರಮ ಹಾಗೂ ಸ್ಪರ್ಧೆ ನಡೆಯಿತು.


ಸಭಾಧ್ಯಕ್ಷರಾಗಿ ಶಿವಪ್ರಸಾದ್ ಸೊಲ್ತಾಡಿ, ಅತಿಥಿ ಗಣ್ಯರಾಗಿ ಕರಿಯಂಗಳ ಗ್ರಾಮ ಪಂಚಾಯತ್ ನ ಅಧ್ಯಕ್ಷರು ಚಂದ್ರಹಾಸ್ ಪಲ್ಲಿಪಾಡಿ, ಉಪಾಧ್ಯಕ್ಷರಾದ ವೀಣಾ ಆಚಾರ್ಯ, ಕರಿಯಂಗಳ ಗ್ರಾಮ ಪಂಚಾಯತ್‌ನ ಸದಸ್ಯರಾದ ರಾಜುಕೋಟ್ಯಾನ್, ಲಕ್ಷ್ಮೀಶ್ ಪಲ್ಲಿಪಾಡಿ, ಹಾಗೂ ಶ್ರೀ ಧರ್ಮಶಾಸ್ತ ಭಜನಾ ಮಂಡಳಿಯ ಅಧ್ಯಕ್ಷರಾದ ಅಜಯ್ ಸಾಣೂರು ರಕ್ತೇಶ್ವರೀ ಸೇವಾ ಸಮಿತಿಯ ಅಧ್ಯಕ್ಷರಾದ ಹರಿಣಾಕ್ಷಿ ಸಾಣೂರುಪದವು, ಹಾಗೂ ಉರಿನ ಗಣ್ಯರಾದ ಚಂದ್ರಶೇಖರ್ ಸಾಣೂರುಪದವು, ರಾಜೇಶ್ ಆರ್.ಕೆ, ವಿಶ್ವನಾಥ್ ಸಾಣೂರುಪದವು, ವಾಮನ ಸಾಣೂರುಪದವು, ಹಾಗೂ ಶ್ರೀ ಧರ್ಮಶಾಸ್ತ ಭಜನಾ ಮಂಡಳಿಯ ಸದಸ್ಯರ ವತಿಯಿಂದ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಕಾರ್ಯಕ್ರಮವು ಜರಗಿತು.









