ಯಕ್ಷಕಲಾ ಸಂಘ ವರಕೋಡಿ ಇದರ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಕೆಸರುಗದ್ದೆ ಕ್ರೀಡಾಕೂಟ
ಬಡಗಬೆಳ್ಳೂರು: ಯಕ್ಷಕಲಾ ಸಂಘ ವರಕೋಡಿ ಬಡಗಬೆಳ್ಳೂರು ಇದರ ವತಿಯಿಂದ ಯಕ್ಷಧಾಮದ ವಠಾರದಲ್ಲಿ ದೇಶದ ಸ್ವಾತಂತ್ರ್ಯ ದಿನಾಚರಣೆಯ 75 ವರ್ಷದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಧ್ವಜಾರೋಹಣ ನಡೆಯಿತು.
ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬಡಗಬೆಳ್ಳೂರು ಇದರ ನಿವೃತ್ತ ಅಧ್ಯಾಪಕರಾದ ಶ್ರೀ ಗಂಗಾಧರ ರೈ ಕಮ್ಮಾಜೆ ಇವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು ಬಳಿಕ ವರ ಕೋಡಿ ಬಾಕಿ ಮಾರುಗದ್ದೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟ ಉದ್ಘಾಟನೆಗೊಂಡಿತು ಪ್ರಗತಿಪರ ಕೃಷಿಕರಾದ ಸಂಜೀವ ಶೆಟ್ಟಿ ಅವರು ಕ್ರೀಡಾಕೂಟ ಉದ್ಘಾಟಿಸಿದರು ವೇದಿಕೆಯಲ್ಲಿ ಬೆಳ್ಳೂರು ಮಾಡ್ಲಾಯ ದೈವದ ಪಾತ್ರಿಗಳಾದ ಚಂದ್ರಶೇಖರ ಅಜೀಲರು ಕೇಶವ ನಾಲಿಮಾರ್ ಅಧ್ಯಕ್ಷ ರಾಜು ಯಕ್ಷಕಲಾ ಸಂಘದ ಅಧ್ಯಕ್ಷರು ಹಾಗೂ ಕೃಷಿಕರಾದ ಮಹಾಬಲ ಶೆಟ್ಟಿ ವರಕೊಡಿ ಇವರು ಉಪಸ್ಥಿತರಿದ್ದರು.
ಕೆಸರುಗದ್ದೆಯಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು ಸಂಜೆ ಐದು ಗಂಟೆಗೆ ಸಮರೋಪ ಸಮಾರಂಭದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು ಹಲವು ಕಾರ್ಯಕ್ರಮಗಳ ನಡುವೆಯೂ ಬಂಟ್ವಾಳ ಶಾಸಕರಾದ ರಾಜೇಶ್ ನಾಯಕ್ ಆಗಮಿಸಿ ಶುಭ ಹಾರೈಸಿದರು.
ಸಂಜೆ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಬಡಗಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪ್ರಕಾಶ್ ಆಳ್ವ ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕಿನ ಸಂಯೋಜಕರಾದ ತಿರುಲೇಶ್ ಕಮ್ಮಾಜೆ ವೀರಯೋಧ ಯಾದವ ಫ್ರೆಂಡ್ಸ್ ಅಮ್ಮುಂಜೆ ಇದರ ಅಧ್ಯಕ್ಷರಾದ ಉದಯ್ ಕುಮಾರ್ ಅಮ್ಮುಂಜೆ ಹಾಗೂ ನವೀನ್ ಕೋಟ್ಯಾನ್ ಉದ್ಯಮಿಗಳು ಬಿ.ಸಿ.ರೋಡ್, ವೇದಿಕೆಯಲ್ಲಿ ಬೆಳ್ಳೂರು ಶ್ರೀ ಮಾಡ್ಲಾಯ ದೈವದ ಪಾತ್ರಿಗಳಾದ ಚಂದ್ರಶೇಖರ ಅಜೀಲರು ಹಾಗು ಯಕ್ಷಕಲಾ ಸಂಘದ ಅಧ್ಯಕ್ಷ ಕೇಶವ ನಾಳಿಮಾರ್ ಮತ್ತು ಕೃಷಿಕರಾದ ಮಹಾಬಲ ಶೆಟ್ಟಿ ವರಕೊಡಿ ಇವರು ಉಪಸ್ಥಿತರಿದ್ದರು
ಸಂಜೆ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಬಡಗಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಶ್ರೀ ಪ್ರಕಾಶ್ ಆಳ್ವ ವೇದಿಕೆಯಲ್ಲಿ ಬೆಳ್ಳೂರು ಶ್ರೀ ಮಾಡ್ಲಾಯ ದೈವದ ಪಾತ್ರಿಗಳಾದ ಚಂದ್ರಶೇಖರ ಅಜೀಲರು, ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕಿನ ಸಂಯೋಜಕರಾದ ತಿರುಲೇಶ್ ಕಮ್ಮಾಜೆ ವೀರಯೋಧ ಯಾದವ ಫ್ರೆಂಡ್ಸ್ ಅಮ್ಮುಂಜೆ ಇದರ ಅಧ್ಯಕ್ಷರಾದ ಉದಯ್ ಕುಮಾರ್ ಅಮ್ಮುಂಜೆ ಹಾಗೂ ನವೀನ್ ಕೋಟ್ಯಾನ್ ಉದ್ಯಮಿಗಳು ಬಿ.ಸಿರೋಡ್ ಹಾಗೂ ಯಕ್ಷಕಲಾ ಸಂಘದ ಅಧ್ಯಕ್ಷ ಕೇಶವ ನಾಳಿಮಾರ್ ಮತ್ತು ಕೃಷಿಕರಾದ ಮಹಾಬಲ ಶೆಟ್ಟಿ ವರಕೊಡಿ ಇವರು ಉಪಸ್ಥಿತರಿದ್ದರು.