ಶ್ರೀ ಭದ್ರಕಾಳಿ ದೇವಸ್ಥಾನ ಬೆಂಜನಪದವು ಇದರ ಧರ್ಮದರ್ಶಿ ರಮೇಶ್ ಬಿ. ಅವರಿಗೆ ಪುತ್ರ ವಿಯೋಗ
ಪೊಳಲಿ: ಶ್ರೀ ಭದ್ರಕಾಳಿ ದೇವಸ್ಥಾನ ಬೆಂಜನಪದವು ಇದರ ಧರ್ಮದರ್ಶಿ ರಮೇಶ್ ಬಿ. ಬೆಂಜನಪದವು ಇವರ ಪುತ್ರ ರೂಪೇಶ್ ಬೆಂಜನಪದವು ಇವರು ಇಂದು ಬೆಳಿಗ್ಗೆ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ.
ದೇವರ ಸೇವೆ ಜೊತೆಗೆ ಸದಾ ನಗುಮೊಗದಿಂದ ಎಲ್ಲರೊಂದಿಗೂ ಬೆರೆಯುತ್ತಿದ್ದ ರೂಪೇಶ್ ಅವರ ಅಕಾಲಿಕ ಮರಣ ಎಲ್ಲರಿಗೂ ಅರಗಿಸಿಕೊಳ್ಳಲಾಗದ ನೋವಾಗಿದೆ.
ಇವರ ಆತ್ಮಕ್ಕೆ ಸದ್ಗತಿಯನ್ನು ಬೇಡುತ್ತಾ ಇವರ ಕುಟುಂಬದವರಿಗೆ ಬಂಧು ಮಿತ್ರರಿಗೆ ನೋವನ್ನು ಭರಿಸುವಂತಹ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಅವರ ಹಿತ್ಯೆಸಿಗಳು ಪ್ರಾರ್ಥಿಸಿದ್ದಾರೆ.
ಇಂದು ಬೆಳಿಗ್ಗೆ 10.30 ಕ್ಕೆ ಬೆಂಜನಪದವಿನ ಅವರ ಸ್ವಗೃಹದಲ್ಲಿ ಅಂತಿಮ ದರ್ಶನ ಹಾಗು ಅಂತ್ಯ ಸಂಸ್ಕಾರ ಕಾರ್ಯ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.