ಪಂಜಿಕಲ್ಲು: ಆಟಿದ ಕೆಸರ್ ಡ್ ಒಂಜಿ ದಿನ, ಗಮನ ಸೆಳೆದ ಕಂಬಳ ಮಾದರಿ ಓಟ
ಸಾಮರಸ್ಯದ ಬದುಕು ಶಾಶ್ವತ : ಮಾಜಿ ಸಚಿವ ರೈ
ಬಂಟ್ವಾಳ:ತುಳುನಾಡಿನಲ್ಲಿ ಕೃಷಿಕರು ಆಷಾಢ ಮಾಸದ ಕಷ್ಟದ ದಿನಗಳಲ್ಲಿಯೂ ನೈಸರ್ಗಿಕ ಆಹಾರ ಪದ್ಧತಿ ಯೊಂದಿಗೆ ಸಾಮರಸ್ಯದ ಬದುಕು ನಡೆಸುತ್ತಿದ್ದ ಬಗ್ಗೆ ಯುವ ಜನತೆಗೆ ತಿಳಿಸುವ ಅಗತ್ಯವಿದೆ ಎಂದು ಆಟಿದ ಕೂಟ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಇಲ್ಲಿನ ಪಂಜಿಕಲ್ಲು ಬಾಲೇಶ್ವರ ಗರಡಿ ಗದ್ದೆಯಲ್ಲಿ ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಪ್ರಯುಕ್ತ ಭಾನುವಾರ ನಡೆದ ‘ ಆಟಿದ ಕೆಸರ್ ಡ್ ಒಂಜಿ ದಿನ ‘ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಂಟ್ವಾಳದ ಮೂಡೂರು_ಪಡೂರು ಕಂಬಳ ಯಶಸ್ವಿಯಾಗಿ ಮುನ್ನಡೆಸಿದ
ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್ ಕೆಸರುಗದ್ದೆ ಕ್ರೀಡಾಕೂಟಕ್ಕೆ ಕಂಬಳದ ಹೊಸ ರೂಪ ನೀಡಿದ್ದಾರೆ ಎಂದರು.
ಆರಂಭದಲ್ಲಿ ಬಾಲೇಶ್ವರ ಜೈನ ಬಸದಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರತನಕ ನಡೆದ ಆಕರ್ಷಕ ಮೆರವಣಿಗೆಯಲ್ಲಿ ಕಂಬಳ ಕೋಣ ಮತ್ತು ಕೊಂಬು ಸಹಿತ ಬ್ಯಾಂಡು ವಾದ್ಯ ಗಮನ ಸೆಳೆಯಿತು. ಕೆಸರಿನಲ್ಲಿ ಕಬಡ್ಡಿ ವಾಲಿಬಾಲ್, ತ್ರೋಬಾಲ್, ಹಗ್ಗ ಜಗ್ಗಾಟ, ಹಿಮ್ಮುಖ ಓಟ, ಲಿಂಬೆ ಚಮಚ, ಸಂಗೀತ ಕುರ್ಚಿ, ಕಂಬಳ ಮಾದರಿ ಓಟ ಜನಾಕರ್ಷಣೆ ಪಡೆಯಿತು. ಸಾವಿರಾರು ಮಂದಿ ಆಟಿ ತಿಂಗಳ ವಿವಿಧ ಬಗೆಯ ತಿಂಡಿ ತಿನಿಸು ಸವಿದರು.
ಸಮಿತಿ ಅಧ್ಯಕ್ಷ ಪಿಯೂಸ್ ಎಲ್ . ರೋಡ್ರಿಗಸ್ , ಪ್ರಧಾನ ಕಾರ್ಯದರ್ಶಿ ಸುದರ್ಶನ್ ಜೈನ್, ಸಂಚಾಲಕ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ದೇವಪ್ಪ ಕುಲಾಲ್, ಪ್ರಮುಖರಾದ ಸಮಿತಿ ಪ್ರಧಾನ ಕಾರ್ಯದರ್ಶಿ ಸುದರ್ಶನ ಜೈನ್ , ಕೋಶಾಧಿಕಾರಿ ದೇವಪ್ಪ ಕುಲಾಲ್ , ಪ್ರಮುಖರಾದ ಬಿ.ಪದ್ಮಶೇಖರ ಜೈನ್ , ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ಮಮತಾ ಎಸ್.ಗಟ್ಟಿ, ಎಡ್ತೂರು ರಾಜೀವ ಶೆಟ್ಟಿ , ಮಹಮ್ಮದ್ ಶರೀಫ್, ಕೆ.ಪದ್ಮನಾಭ ರೈ , ಕೆ.ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಆಲಿ, ವಾಸು ಪೂಜಾರಿ, ಸುರೇಶ್ ಜೋರ , ಪ್ರಕಾಶ್ ಕುಮಾರ್ ಜೈನ್ , ಮಹಮ್ಮದ್ ನಂದರಬೆಟ್ಟು, ಎಂ.ಪದ್ಮರಾಜ ಬಲ್ಲಾಳ್, ಆಲ್ಬರ್ಟ್ ಮಿನೇಜಸ್, ಮೋಹನ ಗೌಡ ಕಲ್ಮಂಜ, ಕೃಷ್ಣರಾಜ ಜೈನ್ , ಸೀತಾರಾಮ ಶೆಟ್ಟಿ ಕಾಂತಾಡಿ , ದಿನೇಶ್ ಶೆಟ್ಟಿ , ಕೇಶವ ಪೂಜಾರಿ , ಸದಾನಂದ ಶೆಟ್ಟಿ , ಚೇತನ್ ಬುಡೋಳಿ , ರಾಜೇಶ್ ಗೌಡ, ವಿಲ್ಮಾ ಡಿಸೋಜ, ಜಯಂತಿ ಪೂಜಾರಿ, ಮಲ್ಲಿಕಾ ಶೆಟ್ಟಿ, ಮಲ್ಲಿಕಾ ಪಕ್ಕಳ, ಜೋಸ್ಫಿನ್ ಡಿಸೋಜ, ಐಡಾ ಸುರೇಶ್ ಮತ್ತಿತರರು ಇದ್ದರು. ಬಾಲಕೃಷ್ಣ ಆಳ್ವ ಮತ್ತು ರಾಜೀವ ಕಕ್ಯಪದವು ನಿರೂಪಿಸಿದರು .