Published On: Fri, Aug 12th, 2022

ಮೋಹನದಾಸ್ ಬಂಗೇರ ಮಾಲಕತ್ವದ ‘ದೇವಿ ದೀಪ ಜನರಲ್ ಸ್ಟೋರ್’ ಉದ್ಘಾಟನೆ

ಕೈಕಂಬ: ವಾಮಂಜೂರು ಪಿಲಿಕುಳ ರಸ್ತೆಯಲ್ಲಿರುವ ಅಮೃತ ಸಾಗರ ಕಟ್ಟಡದಲ್ಲಿ ಹೊಸದಾಗಿ ಸ್ಥಾಪಿಸಲಾದ, ಮೋಹನದಾಸ್ ಬಂಗೇರ ಮಾಲಕತ್ವದ ‘ದೇವಿ ದೀಪ ಜನರಲ್ ಸ್ಟೋರ್’ನ್ನು ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಶುಕ್ರವಾರ ದೀಪ ಬೆಳಗಿಸಿ ಉದ್ಘಾಟಿಸಿದರು.

ಡಾ. ಭರತ್ ಶೆಟ್ಟಿ ಮಾತನಾಡಿ, ಬೆಳೆಯುತ್ತಿರುವ ನಗರದಲ್ಲಿ ಸರ್ವಿಸ್ ಓರಿಯೆಂಟೆಂಡ್‌ನಂತಹ(ಹೋಂ ಡೆಲಿವರಿ) ವ್ಯಾಪಾರೋದ್ಯಮಗಳ ಅಗತ್ಯವಿದೆ. ವ್ಯಾಪಾರಿಯಾಗಿದ್ದುಕೊಂಡು ಉದ್ಯಮ ಕ್ಷೇತ್ರದಲ್ಲೂ ನಾಯಕತ್ವ ಗುಣ ಮೈಗೂಡಿಕೊಳ್ಳಲು ಸಾಧ್ಯವಿದೆ ಎಂದರು.

ಬಿಲ್ಲವರ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್ ಮಾತನಾಡಿ, ಧಾರ್ಮಿಕ, ಸಾಮಾಜಿಕ ಹಾಗೂ ಇತರೆಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಇವರ(ಮೋಹನದಾಸ್)ಉದ್ಯಮಕ್ಕೆ ಎಲ್ಲರು ಬೆಂಬಲ ನೀಡಿದಲ್ಲಿ, ಅವರಿಂದ ಇನ್ನಷ್ಟು ಸಮಾಜ ಸೇವಾಕಾರ್ಯ ನಡೆಯಲಿದೆ ಎಂದು ಆಶಿಸಿದರು.

ಮೂಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಕಾರ್ಪೊರೇಟರ್ ಜಯಪ್ರಕಾಶ್(ಜೆಪಿ), ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಅಧ್ಯಕ್ಷ ಓಂಪ್ರಕಾಶ್ ಶೆಟ್ಟಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಾಮಂಜೂರು ಶಾಖೆಯ ಪ್ರಬಂಧಕ ನರೇಶ್ ಕುಮಾರ್ ಬಿ, ಎಸ್.ಆರ್ ಮಸಾಲೆಯ ಶೈಲೇಂದ್ರ ಸುವರ್ಣ, ಉದ್ಯಮಿ ಮೋಹನದಾಸ ಬಂಗೇರ, ಪತ್ನಿ ರಸಿಕಾ, ತಾಯಿ ಕಮಲಾ ಬಂಗೇರ, ರವೀಂದ್ರ, ಮಂಜುನಾಥ ಭಂಡಾರಿ ಶೆಡ್ಡೆ, ಸತೀಶ್ ಶೆಟ್ಟಿ ಮೂಡುಜೆಪ್ಪುಗುತ್ತು, ಗೆಜ್ಜೆ ಗಿರಿ ನಂದನ ಬಿತ್ತ್ ಲ್ ಕ್ಷೇತ್ರದ ರವಿಪೂಜಾರಿ ಚಿಲಿಂಬಿ, ಪಿ.ಡಬ್ಲ್ಯೂ.ಡಿ ಕಾಂಟ್ರೇಕ್ಟರ್, ರಾಜೇಂದ್ರ ಚಿಲಿಂಬಿ, ರಾಜೇಶ್ ಕೊಟ್ಟಾರಿ, ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು, ಹರಿಕೇಶ್ ಶೆಟ್ಟಿ ನಡಿಗುತ್ತು, ದಿನೇಶ್ ಕರ್ಕೇರ, ಅನಿಲ್ ಕುಮಾರ್ ರೈ ವಾಮಂಜೂರು, ಸದಾನಂದ ಪೂಜಾರಿ, ಐತಪ್ಪ ಪೂಜಾರಿ, ಶೇಖರ್ ಪೂಜಾರಿ, ಬಂಗೇರ ಕುಟುಂಬಿಕರು ಹಾಗೂ ಅಭಿಮಾನಿ ಬಂಧುಗಳು ಉಪಸ್ಥಿತರಿದ್ದರು. ವಾಮಂಜೂರು ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಉಮೇಶ್ ಕೋಟ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter