ಬಂಟ್ವಾಳ: ಸಿಪಿಐ ತಾಲ್ಲೂಕು ಸಮ್ಮೇಳನ ‘ಡಿಪಿ ಬದಲಿಗೆ ಜಿಡಿಪಿ ಬದಲಿಸಿ’: ಪ್ರಧಾನಿಗೆ ಸಲಹೆ
ಬಂಟ್ವಾಳ: ಬಂಟ್ವಾಳದಲ್ಲಿ ಆ.09ರಂದು ಮಂಗಳವಾರ ನಡೆದ ಸಿಪಿಐ ತಾಲ್ಲೂಕು ಸಮ್ಮೇಳನದಲ್ಲಿ ಸಿಪಿಐ ಮುಖಂಡ ವಿ. ಕುಕ್ಯಾನ್ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರವು ಅಸಂಬದ್ಧ ಹೇಳಿಕೆಗಳ ಮೂಲಕ ಜನರ ಹಾದಿ ತಪ್ಪಿಸಲು ಯತ್ನಿಸುತ್ತಿದೆ. ದೇಶದಲ್ಲಿ ಕಳೆದ ೭೫ ವರ್ಷಗಳಿಂದಲೂ ಜನತೆ ರಾಷ್ಟ್ರಧ್ವಜಕ್ಕೆ ಗೌರವ ನೀಡುತ್ತಲೇ ಬಂದಿದ್ದಾರೆ. ಪ್ರತೀ ಮನೆಯಲ್ಲಿ ರಾಷ್ಟçಧ್ವಜ ಬಳಸಲು ತಯಾರಿಸಿದ ಕೆಲವೊಂದು ಲೋಪಗಳಿಂದ ಕೂಡಿದ್ದು, ಇದರಿಂದ ರಾಷ್ಟ್ರಧ್ವಜಕ್ಕೆ ಅವಮಾನವಾಗಿದೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ಡಿಪಿ ಬದಲಾಯಿಸುವ ಬದಲಾಗಿ ಜಿಡಿಪಿ ಬದಲಾಗಬೇಕು ಎಂದು ಸಿಪಿಐ ಮುಖಂಡ ವಿ.ಕುಕ್ಯಾನ್ ಟೀಕಿಸಿದ್ದಾರೆ.
ಬಂಟ್ವಾಳದಲ್ಲಿ ಮಂಗಳವಾರ ನಡೆದ ಸಿಪಿಐ ತಾಲ್ಲೂಕು ಸಮ್ಮೇಳನದಲ್ಲಿ ಅವರು ಮಾತನಾಡಿದರು. ಪುರಸಭೆ ಮಾಜಿ ಸದಸ್ಯ ಭೋಜ ಕರಂಬೆರ ಧ್ವಜಾರೋಹಣ ನೆರವೇರಿಸಿದರು.
ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಭಾರತಿ ಪ್ರಶಾಂತ್, ಸಿಪಿಐ ಮುಖಂಡ ಬಿ.ಬಾಬು ಭಂಡಾರಿ, ಪ್ರಮುಖರಾದ ಪ್ರೇಮನಾಥ ಕೆ., ಕುಸುಮ, ರಾಜೀವ ಪೂಜಾರಿ ಇದ್ದರು.
ಸಿಪಿಐ ಕಾರ್ಯದರ್ಶಿ ಬಿ.ಶೇಖರ್ ಲೆಕ್ಕಪತ್ರ ಮಂಡಿಸಿದರು. ಪ್ರತಿನಿಧಿಗಳಾದ ವಿಶ್ವನಾಥ ಕಳ್ಳಿಗೆ, ಬಿ. ಎಂ. ಹಸೈನಾರ್ ವಿಟ್ಲ, ಬಿ.ಬಾಬು ಭಂಡಾರಿ, ಭಾರತಿ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.
ಇದೇ ವೇಳೆ ೧೫ ಮಂದಿ ಸದಸ್ಯರ ನೂತನ ಸಮಿತಿ ರಚನೆ ಮತ್ತು ೧೨ ಪ್ರಮುಖ ಬೇಡಿಕೆಗಳ ನಿರ್ಣಯ ಮಂಡಿಸಲಾಯಿತು. ಸಹ ಕಾರ್ಯದರ್ಶಿ ಸುರೇಶ್ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಮಿತಾ ವಂದಿಸಿದರು.