ಬಂಟ್ವಾಳ ಮುಂದುವರಿದ ಮಳೆ ಹಾನಿ
ಬಂಟ್ವಾಳ: ತಾಲ್ಲೂಕಿನ ಮೇರಮಜಲು ನಿವಾಸಿ ಮಾಧವ ಎಂಬವರ ಮನೆ ಸ್ನಾನಗೃಹ ಕುಸಿದು ಬಿದ್ದಿದೆ. ಬಂಟ್ವಾಳ ತಾಲ್ಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಹಲವೆಡೆ ಮನೆ ಮತ್ತಿತರ ಹಾನಿ ಮುಂದುವರಿದಿದೆ.
ಇಲ್ಲಿನ ಮೇರಮಜಲು ನಿವಾಸಿ ಮಾಧವ ಎಂಬವರ ಮನೆ ಸ್ನಾನಗೃಹ ಕುಸಿದು ಬಿದ್ದಿದೆ. ಪುದು ಗ್ರಾಮದ ಸುಜೀರು ನಿವಾಸಿ ಇಕ್ಬಾಲ್ ಎಂಬವರ ಮನೆ ಬಳಿ ಆವರಣಗೋಡೆ ಕುಸಿದು ಬಿದ್ದಿದ್ದು, ನಾವೂರು ಗ್ರಾಮದ ಜೋಸೆಫ್ ಜಾನ್ ಎಂಬವರ ರಬ್ಬರ್ ಮತ್ತು ತೆಂಗಿನ ಕೃಷಿ ಹಾನಿಗೀಡಾಗಿದೆ.