ಆ.07ರಂದು ಬೆಳ್ಳೂರಿನಲ್ಲಿ ಆಟಿದ ಕೂಟ
ಬೆಳ್ಳೂರು: ಬಂಟರ ಸಂಘ ಬೆಳ್ಳೂರು ವಲಯದ ವತಿಯಿಂದ ತುಳುನಾಡಿನ ವಿಶೇಷ ಆಚರಣೆಯಾದ ಆಟಿದ ಕೂಟ ಆ.07ರಂದು ಭಾನುವಾರ ಬೆಳ್ಳೂರು ಕಾವೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.

ಗೌರವಾಧ್ಯಕ್ಷ ರಘುನಾಥ್ ಪಯ್ಯಡೆ ಕುರಿಯಾಳ ಗುತ್ತು, ಅಧ್ಯಕ್ಷ ಜನಾರ್ಧನ ಶೆಟ್ಟಿ, ಉಪಾಧ್ಯಕ್ಷರಾದ ಸಂಧ್ಯಾ ಡಿ. ರೈ, ಕುಂದಬೆಟ್ಟು, ಪುಷ್ಪರಾಜ್ ಶೆಟ್ಟಿ ಕಮ್ಯಾಜೆ, ಕಾರ್ಯದರ್ಶಿ ನರೇಶ್ ಕುಮಾರ್ ಶೆಟ್ಟಿ ಕುರಿಯಾಳ ಪಡು, ಜೊತೆ ಕಾರ್ಯದರ್ಶಿ ಪ್ರಣಾಮ್ ಶೆಟ್ಟಿ ಪೊಳಲಿ, ಕೋಶಾಧಿಕಾರಿ ಕರುಣಾಕರ ಶೆಟ್ಟಿ ಗುಂಡಾಲಗುತ್ತು, ಕ್ರೀಡಾ ಕಾರ್ಯದರ್ಶಿ ರಿತೇಶ್ ಶೆಟ್ಟಿ ಗುಂಡಾಲಗುತ್ತು, ಸಂಘಟನಾ ಕಾರ್ಯದರ್ಶಿಗಳಾದ ಸುಧೀರ್ ಎಸ್. ಪೂಂಜ ಅತಿಕಾರಹಿತ್ಲು, ಶೇಖರ್ ಸಾಮನಿ ಮಾಯಿಲ್ ಕೋಡಿ, ಲಕ್ಷ್ಮೀಶ್ ಶೆಟ್ಟಿ ಪಲ್ಲಿಪಾಡಿ, ಯುವ ವಿಭಾಗ ಬಂಟರ ಸಂಘ, ಬೆಳ್ಳೂರು ವಲಯ, ಮಹಿಳಾ ವಿಭಾಗ ಬಂಟರ ಸಂಘ, ಬೆಳ್ಳೂರು ವಲಯ, ಕಾರ್ಯಕಾರಿಣಿ ಸಮಿತಿ ಸದಸ್ಯರು, ಬೆಳ್ಳೂರು ವಲಯ, ಬಂಟರ ಸಂಘ ಬಂಟ್ವಾಳ ತಾಲೂಕು
ಸಭಾ ಕಾರ್ಯಕ್ರಮ
ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯನಂದ ಸ್ವಾಮೀಜಿ ದೀಪ ಪ್ರಜ್ವಲಿಸಿ ಉದ್ಘಾಟಿಸಲಿದ್ದಾರೆ, ಬಂಟರ ಸಂಘದ ಆಧ್ಯಕ್ಷ ಚಂದ್ರಹಾಸ್ ಡಿ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಶ್ರೀ ಆನ್ ಶೆಟ್ಟಿ ಬೊಂಡಂತಿಲಗುತ್ತು ಅವರು ಆಟಿ ಆಚರಣೆ ಬಗ್ಗೆ ಮಾಹಿತಿ ನೀಡಲಿದ್ದಾರೆ, ಅತಿಥಿಗಳಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ರಮಾನಾಥ ರೈ, ಸಂತೋಷ್ ಶೆಟ್ಟಿ, ಜಗನ್ನಾಥ ಚೌಟ, ರಂಜನ್ ಕುಮಾರ್ ಶೆಟ್ಟಿ, ಕೆ. ದನಂಜಯ್ ರೈ, ರಮಾ ಭಂಡಾರಿ, ನಿಶಾನ್ ಆಳ್ವ, ಪ್ರಕಾಶ್ ಆಳ್ವ , ಮಲ್ಲಿಕಾ ಶೆಟ್ಟಿ, ಸುಕೇಶ್ ಚೌಟ, ಚಂದ್ರಹಾಸ ಶೆಟ್ಟಿ ನಾರ್ಲ, ಚರಣ್ ಆಳ್ವ ಚಿಪ್ಪಾರು ಗುತ್ತು, ಪ್ರದೀಪ್ ಶೆಟ್ಟಿ ಬೆಳ್ಳೂರು ಪರಾರಿ, ರತ್ನಾಕರ ಶೆಟ್ಟಿ ಮುಂಡಡ್ಕಗುತ್ತು, ಸದಾಶಿವ ಶೆಟ್ಟಿ ಬೆಳ್ಳೂರು ಮಠ, ಕೃಷ್ಣ ಪ್ರಸಾದ್ ರೈ ಬೆಳ್ಳೂರು ಗುತ್ತು, ಡಾ. ರಾಜೇಶ್ ಶೆಟ್ಟಿ ಕಿರಾಳೆಗುತ್ತು, ರಾಧಕೃಷ್ಣ ಆಳ್ವ ಬೆಳ್ಳೂರು ಗುತ್ತು, ಉಮೇಶ್ ಶೆಟ್ಟಿ ದೇವಸ್ಯ ಉಪಸ್ಥಿತರಿರುವರು. ಪ್ರಶಾಂತ್ ಬಿ ಶೆಟ್ಟಿ ಶಿರ್ವ ಕಾರ್ಯಕ್ರಮ ನಿರೂಪಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ತರಗತಿಗಳಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ, ಆಟೋಟ ಸ್ಪರ್ಧೆಗಳು, ಹಗ್ಗ ಜಗ್ಗಾಟ, ಕಬಡ್ಡಿ, ಒಂದು ಕಾಲಿನ ಓಟ ಮತ್ತು ಲಕ್ಕಿ ಗೇಮ್ಸ್, ಸಾಂಸ್ಕೃತಿಕ ಕಾರ್ಯಕ್ರಮ ರಂಗ ಸುದರ್ಶನ (ರಿ.) ಸಸಿಹಿತ್ಲು ಇವರಿಂದ ಬಂಟೆರೆ ಸಿಲ ಭ್ರಾಮರಿ ಬಂಟ ಸಮಾಜದ ಭಕ್ತಿ ನಂಬಿಕೆಯ ಸ್ತ್ರೀ ಶಕ್ತಿಗಳ ಕಥಾನಕ ನಡೆಯಲಿದೆ ಎಂದು ಬೆಳ್ಳೂರು ಬಂಟರ ಸಂಘದ ಅಧ್ಯಕ್ಷ ಕೆ.ಜನಾರ್ಧನ ಶೆಟ್ಟಿ ಕನ್ಯಬೆಟ್ಟು ಸುದ್ದಿ9ಗೆ ಮಾಹಿತಿ ನೀಡಿದರು.