ಶ್ರೀ ಕ್ಷೇತ್ರ ಪೊಳಲಿಯಲ್ಲಿ ಅಖಂಡ ಭಜನಾ ಸಪ್ತಾಹಕ್ಕೆ ಚಾಲನೆ
ಕೈಕಂಬ :ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಅಖಂಡ ಭಜನಾ ಸಪ್ತಾಹಕ್ಕೆ ಆ.೦೩ರಂದು ಚಾಲನೆ ನೀಡಲಾಯಿತು.

ದೇವಳದ ತಂತ್ರಿ ವೆಂಕಟೇಶ್, ಪ್ರ. ಅರ್ಚಕಮಾಧವ ಭಟ್,ನಾರಾಯಣ ಭಟ್, ಪರಮೇಶ್ವರಭಟ್, ರಾಮ್ ಭಟ್,ವಿಷ್ಣುಮೂರ್ತಿ ನಟ್ಟೋಜ ಹಾಗೂ ದೇವಳದ ಮೊಕ್ತೇಸರ ಚೇರ ಸೂರ್ಯನಾರಾಯಣ ರಾವ್, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಸೇಸಪ್ಪ ಕೋಟ್ಯಾನ್ ಪಚಿನಡ್ಕ, ಭದ್ರಕಾಳಿ ದೇವಸ್ಥಾನದ ದೇವಿ ಪಾತ್ರಿ ರಮೇಶ್, ಹಿಮಕರ ರಾವ್, ತಾ.ಪಂ. ಸದಸ್ಯ ಯಶವಂತ ಪೂಜಾರಿ, ಗ್ರಾ.ಪಂ.ಸದಸ್ಯ ಲೋಕೇಶ್ ಭರಣಿ ,ಉಪಸ್ಥಿತರಿದ್ದರು.
