ಬಂಟ್ವಾಳ: ವಿವಿಧೆಡೆ ಸಂಭ್ರಮದ ನಾಗರಪಂಚಮಿ
ಬಂಟ್ವಾಳ: ತಾಲ್ಲೂಕಿನ ರಾಯಿ ಸಮೀಪದ ಬದನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನಾಗರಪಂಚಮಿ ಪ್ರಯುಕ್ತ ಮಂಗಳವಾರ ವಿಶೇಷ ಪೂಜೆ ನಡೆಯಿತು.
ಬಂಟ್ವಾಳ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಸಹಿತ ವಿವಿಧೆಡೆ ನಾಗರಪಂಚಮಿ ಪ್ರಯುಕ್ತ ನಾಗನ ವಿಗ್ರಹಕ್ಕೆ ಮಂಗಳವಾರ ಕ್ಷೀರಾಭಿಷೇಕ ಮತ್ತು ಸೀಯಾಳ ಸಹಿತ ವಿಶೇಷ ಪೂಜೆ ನಡೆಯಿತು. ಬಿ.ಸಿ.ರೋಡು ಅನ್ನಪೂರ್ಣೇಶ್ವರಿ ದೇವಸ್ಥಾನ ಸಹಿತ ರಕ್ತೇಶ್ವರಿ ದೇವಸ್ಥಾನ ಮತ್ತು ಚಂಡಿಕಾ ಪರಮೇಶ್ವರಿ ದೇವಸ್ಥಾನ ಸೇರಿದಂತೆ ಶಂಭೂರು ಶಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ, ಸಜಿಪನಡು ಸುಬ್ರಹ್ಮಣ್ಯ ಕ್ಷೇತ್ರ, ರಾಯಿ ಶ್ರೀ ಮಹಾಲಿಗೇಶ್ವರ ದೇವಸ್ಥಾನ ಮತ್ತಿತರ ಕಡೆಗಳಲ್ಲಿ ನಾಗನ ವಿಗ್ರಹಕ್ಕೆ ಕ್ಷೀರಾಭಿಷೇಕ ಮತ್ತು ಸೀಯಾಳ ಅಭಿಷೇಕ ನಡೆಯಿತು. ಇದೇ ವೇಳೆ ಭಜನೆ, ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಬದನಡಿ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಚೌಟ, ಅನುವಂಶಿಕ ಪ್ರಧಾನ ಅರ್ಚಕ ಕೆ.ಸುಂದರ ಹೊಳ್ಳ, ರಾಜಾ ಎಸ್. ಹೊಳ್ಳ ಪತ್ತುಮುಡಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ ಬದನಡಿ, ಪ್ರಧಾನ ಕಾರ್ಯದರ್ಶಿ ರಾಜೇಶ ಗೋವಿಂದ ಬೆಟ್ಟು, ಶರತ್ ಕುಮಾರ್ ಕೊಯಿಲ, ಲೋಕೇಶ ಕೈತ್ರೋಡಿ, ನಳಿನಾಕ್ಷಿ ಮೋಹನ್ ಪೂಜಾರಿ, ಯಮುನಾ ತಿಮ್ಮಪ್ಪ ಪೂಜಾರಿ, ರಶ್ಮಿತ್ ಶೆಟ್ಟಿ ಕೈತ್ರೋಡಿ, ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಸಂತೋಷ್ ಕುಮಾರ್ ಬೆಟ್ಟು, ಮೋಹನ್ ಕೆ.ಶ್ರೀಯಾನ್ ರಾಯಿ, ದಿನೇಶ ಸುವರ್ಣ, ಅರ್ಚಕ ನಾಗೇಶ ರಾವ್ ಮತ್ತಿತರರು ಇದ್ದರು.ನಾಸಿರ್, ಸಂಸ್ಥೆಯ ಎಚ್‌ಆರ್‌ಡಿ ಚರಣ್ ರಾಜ್, ಸಿಬ್ಬಂದಿ ವಿಲ್ಮಾ, ಗುಣವತಿ ಇದ್ದರು.