ಬಂಟ್ವಾಳ: ತಾಲ್ಲೂಕಿನ ಸಂಗಬೆಟ್ಟು ಗ್ರಾಮ ಪಂಚಾಯಿತಿನಲ್ಲಿ ಜು.30ರಂದು ಶನಿವಾರ ನಡೆದ ‘ಹರ್ ಘರ್ ಜಲ್ ಗ್ರಾಮ ಘೋಷಣೆ’ ಕಾರ್ಯಕ್ರಮದಲ್ಲಿ ಸದಸ್ಯರು ಘೋಷಣೆ ಕೂಗಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಪೂಜಾರಿ ಮತ್ತಿತರರು ಇದ್ದಾರೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಸಂಗಬೆಟ್ಟು ಗ್ರಾಮ ಪಂಚಾಯತಿನಲ್ಲಿ ಶನಿವಾರ ಏರ್ಪಡಿಸಿದ್ದ ‘ಹರ್ ಘರ್ ಜಲ್ ಗ್ರಾಮ ಘೋಷಣೆ’ ಕಾರ್ಯಕ್ರಮದಲ್ಲಿ ಸಂಗಬೆಟ್ಟು ಮತ್ತು ಕರ್ಪೆ ಗ್ರಾಮವನ್ನು ‘ಹರ್ ಘರ್ ಜಲ್ ಗ್ರಾಮ’ವಾಗಿ ಘೋಷಣೆ ಮಾಡಲಾಯಿತು.
ಕೇಂದ್ರ ಸರ್ಕಾರದಿಂದ ಪ್ರತೀ ಮನೆಗೂ ಕುಡಿಯಲು ನಳ್ಳಿ ನೀರು ಪೂರೈಸುವ ಮತ್ತರರ ಯೋಜನೆ ‘ಜಲಜೀವನ್ ಮಿಷನ್’ ಯೋಜನೆಯಡಿ ತನ್ನ ಗುರಿ ಮುಟ್ಟಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಪೂಜಾರಿ ಅಳಕ್ಕೆ ಹೇಳಿದರು. ಉಪಾಧ್ಯಕ್ಷೆ ವಿಮಲಾ ಮೋಹನ್, ಪಿಡಿಒ ಪದ್ಮ ನಾಯ್ಕ್, ಕಾರ್ಯದರ್ಶಿ ರೋಹಿಣಿ ಶೆಟ್ಟಿ, ಜಲಜೀವನ್ ಮಿಷನ್ ಯೋಜನಾ ವ್ಯವಸ್ಥಾಪಕ ವಿಘ್ನೇಶ್ ರಾಜ್, ಎಂಜಿನಿಯರ್ ನಾಸಿರ್, ಸಂಸ್ಥೆಯ ಎಚ್‌ಆರ್‌ಡಿ ಚರಣ್ ರಾಜ್, ಸಿಬ್ಬಂದಿ ವಿಲ್ಮಾ, ಗುಣವತಿ ಇದ್ದರು.
