ಬಿ.ಸಿ.ರೋಡು: ಮೆಸ್ಕಾಂ ‘ಆಜಾದ್ ಕೀ ಅಮೃತ ಮಹೋತ್ಸವ’ ಕಾರ್ಯಕ್ರಮಕ್ಕೆ ಚಾಲನೆ ಪ್ರಧಾನಿ ಮೋದಿ ದೇಶಕ್ಕೆ ಬೆಳಕು ನೀಡಿದ್ದಾರೆ: ಶಾಸಕ ರಾಜೇಶ ನಾಯ್ಕ್
ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಮೆಸ್ಕಾಂ ಇಲಾಖೆ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಅಜಾದ್ ಕೀ ಅಮೃತ್ ಮಹೋತ್ಸವ’ ಕಾರ್ಯಕ್ರಮಕ್ಕೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಚಾಲನೆ ನೀಡಿದರು. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಮೆಸ್ಕಾಂ ಎಂಡಿ ಪ್ರಶಾಂತ್ ಕುಮಾರ್ ಮಿಶ್ರ ಮತ್ತಿತರರು ಇದ್ದಾರೆ.
ದೇಶದ ೭೫ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ‘ಆಜಾದ್ ಕೀ ಅಮೃತ ಮಹೋತ್ಸವ’ ಆಚರಣೆ ಜೊತೆಗೆ ಪ್ರತೀ ಹಳ್ಳಿಗೆ ವಿದ್ಯುತ್ ಸಂಪರ್ಕ ನೀಡುವ ಯೋಜನೆ ರೂಪಿಸಿದ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಬೆಳಕು ನೀಡಿದ್ದಾರೆ. ಸರ್ಕಾರಿ ಕೆಲಸ ಶೃದ್ಧೆಯಿಂದ ಮಾಡಿದಾಗ ಮಾತ್ರ ಯಶಸ್ವಿ ದೊರೆತು ದೇಶಕಟ್ಟುವ ಕಾರ್ಯದಲ್ಲಿ ಪರೋಕ್ಷ ಸಹಕಾರಿಯಾಗುತ್ತದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಮೆಸ್ಕಾಂ ಇಲಾಖೆ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಅಜಾದ್ ಕೀ ಅಮೃತ್ ಮಹೋತ್ಸವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅವರು ಅಜಾದ್ ಕಿ.ಅಮೃತ್ ಮಹೋತ್ಸವ ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬಳಿಕ ಮಾತನಾಡಿದರು.
ಇಲ್ಲಿನ ಅರ್ಬಿಗುಡ್ಡೆಯಲ್ಲಿ ರೂ ೧೨ ಕೋಟಿ ವೆಚ್ಚದಲ್ಲಿ ಗ್ಯಾಸ್ ಇನ್ಸುಲೇಟೆಡ್ ವಿದ್ಯುತ್ ಉಪಕೇಂದ್ರ ಸ್ಥಾಪಿಸಿ ಸುಮಾರು ೨೦ಸಾವಿರ ಮಂದಿಗೆ ಪ್ರಯೋಜನ ಸಿಕ್ಕಿದೆ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ರೂ ೬.೧೧ ಕೋಟಿ ವೆಚ್ಚದಲ್ಲಿ ಒಟ್ಟು ೮೭೩ ಮಂದಿಗೆ ವಿದ್ಯುತ್ ಸಂಪರ್ಕ, ಸೌಭಾಗ್ಯ ಯೋಜನೆಯಡಿ ರೂ.೩.೪೧ ಕೋಟಿ ವೆಚ್ಚದಲ್ಲಿ ಒಟ್ಟು ೯೫೫ ಮಂದಿ ಸೇರಿದಂತೆ ಬೆಳಕು ಯೋಜನೆಯಡಿ ಹಲವು ಮನೆಗಳಿಗೆ ವಿದ್ಯುತ್ ಸಂಪರ್ಕ ದೊರೆತಿದೆ. ರೂ.೩೯.೧೮ ಲಕ್ಷ ವೆಚ್ಚದಲ್ಲಿ ಒಟ್ಟು ೯೪ ಮನೆಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.ಮಾತನಾಡಿ, ಸರ್ಕಾರಿ ಕೆಲಸ ದೇವರ ಕೆಲಸ ಎಂಬAತೆ ದೇಶ ಪ್ರೇಮದಿಂದ ಕರ್ತವ್ಯ ನಿರ್ವಹಿಸಿದಾಗ ಜನತೆಗೆ ಅನುಕೂಲವಾಗುತ್ತದೆ ಎಂದರು.
ಮೆಸ್ಕಾಂ ಎಂಡಿ ಪ್ರಶಾಂತ್ ಕುಮಾರ್ ಮಿಶ್ರ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕುಮಾರ್, ಜಿಲ್ಲಾ ನೋಡಲ್ ಅಧಿಕಾರಿ ಚಿತ್ತರಂಜನ್, ತಹಶಿಲ್ದಾರ್ ಡಾ.ಸ್ಮಿತಾ ರಾಮು, ತಾಂತ್ರಿಕ ನಿರ್ದೇಶಕಿ ಪದ್ಮಾವತಿ ಡಿ. ಮತ್ತಿತರರು ಇದ್ದರು.