ಮುಂಬೈ ಸಾಹಿತಿ ನಂದಳಿಕೆ ನಾರಾಯಣ ಶೆಟ್ಟಿಯವರ ”ರಾವೊ ಪಕ್ಕಿ” ಮತ್ತು ಪುಣೆಯ ಮಮತಾ ಅಂಚನ್ ಅವರ ”ಇರೆನ ಮೋಕೆದ ನೆಂಪು..” ಎರಡು ಹಾಡುಗಳು ಏಕಕಾಲದಲ್ಲಿ ಐಲೇಸಾದಲ್ಲಿ ಬಿಡುಗಡೆ ..
ಮುಂಬಯಿ: ಖ್ಯಾತ ಸಾಹಿತಿ,ರಂಗ ಕರ್ಮಿ ನಂದಳಿಕೆ ನಾರಾಯಣ ಶೆಟ್ಟಿ ಅವರು ರಚಿಸಿರುವ ”ರಾವೊ ಪಕ್ಕಿ..!” ಎನ್ನುವ ತುಳುನಾಡಿನ ಹಿಂದಿನ ಮತ್ತು ಇಂದಿನ ಸಾಮಾಜಿಕ ಜೀವನದ ಸ್ಥಿತ್ಯಂತರದ ಬಗೆಗಿನ ಸತ್ವಯುತ ಗೀತೆ ಮತ್ತು ಪುಣೆಯ ಸಾಹಿತಿ ಮಮತಾ ಅಂಚನ್ ಅವರ ”ಇರೆನ ಮೋಕೆದ ನೆಂಪು” ಎನ್ನುವ ವಿಶಿಷ್ಟ ದಾಂಪತ್ಯ ಗೀತೆ ರಾಗ ಸಂಯೋಜನೆಗೊಂಡು ಐಲೇಸಾ – ದಿ ವಾಯ್ಸ್ ಆಫ್ ಓಷನ್ (ರಿ) ಸಂಸ್ಥೆಯಿಂದ ಏಕಕಾಲದಲ್ಲಿ ಶುಕ್ರವಾರ 29-7-2022 ಭಾರತದ ಸಮಯ ಸಂಜೆ 7:30 ಕ್ಕೆ zoom Digital ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.
![](https://www.suddi9.com/wp-content/uploads/2022/07/WhatsApp-Image-2022-07-27-at-10.24.09-AM-1.jpeg)
![](https://www.suddi9.com/wp-content/uploads/2022/07/WhatsApp-Image-2022-07-27-at-10.24.09-AM-2.jpeg)
![](https://www.suddi9.com/wp-content/uploads/2022/07/WhatsApp-Image-2022-07-27-at-10.24.09-AM.jpeg)
![](https://www.suddi9.com/wp-content/uploads/2022/07/WhatsApp-Image-2022-07-27-at-10.24.10-AM-1.jpeg)
![](https://www.suddi9.com/wp-content/uploads/2022/07/WhatsApp-Image-2022-07-27-at-10.24.10-AM.jpeg)
![](https://www.suddi9.com/wp-content/uploads/2022/07/WhatsApp-Image-2022-07-27-at-10.24.11-AM.jpeg)
”ರಾವೊ ಪಕ್ಕಿ” ಹಾಡನ್ನು ತುಳು ಭಾಷಾ ಪೋಷಕ ಮತ್ತು ಐಲೇಸಾದ ಪ್ರಮುಖ ಪ್ರೋತ್ಸಾಹಕರಾದ ಕುವೈಟ್ ನ ರಘು ಸಿ ಪೂಜಾರಿ ಪ್ರಾಯೋಜಿಸಿದ್ದಾರೆ ಮತ್ತು ”ಇರೆನ ಮೋಕೆದ ನೆಂಪು” ಹಾಡನ್ನು ಬೆಂಗಳೂರಿನ ಖ್ಯಾತ ನ್ಯಾಯವಾದಿ ಶ್ರೀ ನಿಶಿತ್ ಕುಮಾರ್ ಶೆಟ್ಟಿ ಯವರು ತುಳುವ ಭಾಷಾಭಿಮಾನಿಗಳಿಗೆ ಕಾಣಿಕೆಯಾಗಿ ನೀಡಿದ್ದಾರೆ .