ಜು.24ರಂದು ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ – ರಕ್ಷಕರ ಸಭೆ
ಬಂಟ್ವಾಳ : ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ – ರಕ್ಷಕರ ಸಭೆಯು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ರಿಯಾಝ್ ಹುಸೇನ್ ನೇತೃತ್ವದಲ್ಲಿ ಜು.24ರಂದು ಭಾನುವಾರ ಜರಗಿತು. ಸಸಿ ನೆಡುವ ಮೂಲಕ ಸಭೆಯನ್ನು ಉದ್ಘಾಟಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮಂಗಳೂರು ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀ ಅಮಾನುಲ್ಲಾರವರು ಮಾತನಾಡಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಒಂದೇ ನಾಣ್ಯದ ಎರಡು ಮುಖಗಳಂತಿರುವ ಶಿಕ್ಷಕರು ಮತ್ತು ಪೋಷಕರ ಜವಾಬ್ದಾರಿಗಳ ಅರಿವು ಮೂಡಿಸಿದರು.ಮುಸ್ಲಿಂ ಶಾಲಾ ಒಕ್ಕೂಟದ ಅಧ್ಯಕ್ಷರಾದ ಶ್ರೀ ಮೂಸಬ್ಬ ಬ್ಯಾರಿ ಜೋ ಕಟ್ಟೆ ಇವರು ವಿದ್ಯಾರ್ಥಿಗಳು ಸಂಸ್ಕಾರಯುತ ಜೀವನವನ್ನು ರೂಪಿಸಲು ಬೇಕಾದ ಸಲಹೆಗಳನ್ನು ನೀಡಿದರು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಪಿ ಜ್ಞಾನೇಶ್‌ರವರು ಕೊರೋನಾ ಲಸಿಕೆಯ ಮಹತ್ವದ ಕುರಿತು ಪೋಷಕರಿಗೆ ಸಲಹೆ ನೀಡಿದರು.ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಹಾಜಿ ಬಿ.ಎಚ್.ಖಾದರ್ ರವರು ಪೋತ್ಸಾಹಿತ ಮಾತುಗಳನ್ನಾಡುವ ಮೂಲಕ ಪೋಷಕರನ್ನು ಹುರಿದುಂಬಿಸಿದರು.ಈ ಸಂದರ್ಭದಲ್ಲಿ 2021-22 ನೇ ಸಾಲಿನಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ 24 ವಿದ್ಯಾರ್ಥಿಗಳಿಗೆ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.
ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಯವರಾದ ಅಬ್ದುಲ್ ಖಾದರ್‌ರವರು ಸಂಕ್ಷಿಪ್ತ ವರದಿಯನ್ನು ಮಂಡಿಸಿದರು. ಶಾಲಾ ಮುಖ್ಯಶಿಕ್ಷಕಿ ಮೆಟಿಲ್ಡಾ ಡಿ ಕೋಸ್ತಾರವರು ಶಾಲೆಯ ನಿಯಮ ನಿಬಂಧನೆಗಳ ಬಗ್ಗೆ ಸವಿಸ್ತಾರವಾಗಿ ಪೋಷಕರಿಗೆ ಮನವರಿಕೆ ಮಾಡಿದರು. ತೌಹೀದ್ ಮದರಸ ವಿಭಾಗದ ಸದರ್ ಅಬ್ದುಲ್ ಮಜೀದ್ ಫೈಝಿ ವಿದ್ಯಾರ್ಥಿಗಳು ಪಾಲಿಸಬೇಕಾದ ಶಿಸ್ತಿನ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಮೊಹಮ್ಮದ್ ಸಗೀರ್, ಬಂಟ್ವಾಳ ಜುಮಾ ಮಸೀದಿಯ ಅಧ್ಯಕ್ಷರಾದ ಅಹ್ಮದ್ ಶಾಫಿ, ಶಿಕ್ಷಕ- ರಕ್ತಕ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಹನೀಫ್, ಶಾಲಾ ಆಡಳಿತ ಮಂಡಳಿಯ ಖಜಾಂಜಿಯಾದ ಅಬ್ದುಲ್ ರಹಿಮಾನ್, ಸದಸ್ಯರಾದ ಮುನಿಶ್ ಆಲಿ, ಉಬೆದುಲ್ಲಾ, ಹಾರೂನ್ ರಶೀದ್, ಸನಾವುಲ್ಲ, ರಿಯಾಝ್, ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳನ್ನು ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡುವ ಮೂಲಕ ಅಭಿನಂದಿಸಲಾಯಿತು.
ಮುಖ್ಯಶಿಕ್ಷಕಿಯಾದ ಮೆಟಿಲ್ಡಾ ಇವರು ಸ್ವಾಗತಿಸಿ, ಉಪಮುಖ್ಯಶಿಕ್ಷಕಿ ರಚನ ಇವರು ವಂದಿಸಿದರು ಮತ್ತು ಸಹಶಿಕ್ಷಕಿಯರಾದ ನಿಶ್ಮಿತಾ ಮತ್ತು ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.