Published On: Tue, Jul 26th, 2022

ನಡ್ವಂತಾಡಿ ಮಠ: ಕಂಡೊಡು ಒಂಜಿ ದಿನ, ಕೆಸರುಗದ್ದೆ ಆಟೋಟ ಕೃಷಿಯಿಂದ ಮಾನಸಿಕ ನೆಮ್ಮದಿ: ರಾಜೇಶ್ ನಾಯ್ಕ್


ಬಂಟ್ವಾಳ: ಕೃಷಿ ಮಾನಸಿಕ ನೆಮ್ಮದಿ ನೀಡುವ ಅತ್ಯುತ್ತಮ ಉದ್ಯೋಗವಾಗಿದೆ.ಕೃಷಿಯಲ್ಲಿ  ಉತ್ತಮ ಸಂಪಾದನೆಯಾಗದಿದ್ದರೂ ಆರೋಗ್ಯಕರ ಜೀವನ ನಿರ್ವಹಣೆ ಸಾಧ್ಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.

ಜು.24ರಂದು ಭಾನುವಾರ  ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮದ ನಡ್ವಂತಾಡಿ ಶ್ರೀ ಸೋದೆ ವಾದಿರಾಜ ಮಠದ ಶ್ರೀ ವೇದವ್ಯಾಸ ಮುಖ್ಯಪ್ರಾಣ ದೇವರ ಸೇವಾ ಸಮಿತಿ ವತಿಯಿಂದ ಶ್ರೀ ಕ್ಷೇ.ಧ.ಗ್ರಾ.ಯೋಜನೆ, ವಗ್ಗ ವಲಯ, ಶ್ರೀ ಲಕ್ಷ್ಮಿ ಮಹಿಳಾ ಮಂಡಳಿ ಪಾಂಗಲ್ಪಾಡಿ, ಇರ್ವತ್ತೂರು ಹಾಲು ಉತ್ಪಾದಕರ ಸಹಕಾರಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಡ್ವಂತಾಡಿ ಬಾಕಿಮಾರು ಗದ್ದೆ ಯಲ್ಲಿ ನಡೆದ ಕಂಡೊಡು ಒಂಜಿ ದಿನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜನರು ಕೃಷಿ ಕಾರ್ಯಗಳಿಂದ ವಿಮುಖರಾಗುತ್ತಿರುವ ಕಾಲ ಘಟ್ಟದಲ್ಲಿ ಮುಂದಿನ ಪೀಳಿಗೆಗೆ ಕೃಷಿಯ ಬಗ್ಗೆ ಒಲವನ್ನು ಮೂಡಿಸುವ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ ಸಂಘ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು.

ಸಮಿತಿ ಅಧ್ಯಕ್ಷ ಉದಯ ಪಾಂಗಣ್ಣಾಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ದೇಶದಲ್ಲಿ ಕೃಷಿಗೆ ಮಹತ್ವದ ಸ್ಥಾನ ನೀಡಿದ್ದು, ಧಾರ್ಮಿಕತೆಯೊಂದಿಗೆ ಕೃಷಿ ಕಾರ್ಯಗಳು ಬೆಸೆದುಕೊಂಡಿದೆ ಎಂದು ಹೇಳಿದರು.  
 

ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ಇರ್ವತ್ತೂರು ಗ್ರಾ.ಪಂ. ಅಧ್ಯಕ್ಷ ಎಂಪಿ.ಶೇಖರ್, ಉದ್ಯಮಿ ಹರೀಂದ್ರ ಪೈ, ಶ್ರೀ ಕ್ಷೇತ್ರ ಸಿರಿಗುಂಡದಪಾಡಿಯ ಅಧ್ಯಕ್ಷ ಮೋಹನ ಶೆಟ್ಟಿ ನರ್ವಲ್ದಡ್ಡ, ಲ್ಯಾಂಪ್ ಸೊಸೈಟಿ ಅಧ್ಯಕ್ಷ ಸುಂದರ ನಾಯ್ಕ, ತಾ.ಪಂ.ಮಾಜಿ ಸದಸ್ಯ ರಮೇಶ್ ಕುಡ್ಮೇರ್, ಗ್ರಾ.ಪಂ.ನಿಕಟಪೂರ್ವ ಉಪಾಧ್ಯಕ್ಷ ಶಂಕರ ಶೆಟ್ಟಿ ಬೆದ್ರಮಾರ್, ಪಾಂಗಲ್ಪಾಡಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ರಾಮಕೃಷ್ಣ ಎಸ್., ಪಿಲಾತಬೆಟ್ಟು ವ್ಯ.ಸೇ.ಸ.ಸಂಘದ ನಿರ್ದೇಶಕ ಬೂಬ ಸಫಲ್ಯ, ಇರ್ವತ್ತೂರು ಹಾ.ಉ.ಸಂಘದ ಉಪಾಧ್ಯಕ್ಷ ವಿಶ್ವನಾಥ ಚೌಟ ದೇರೆಮಾರು,  ಶ್ರೀ ಲಕ್ಷ್ಮಿ ಮಹಿಳಾ ಮಂಡಳಿ ಶಶಿಕಲಾ ಉಡುಪ, ಇರ್ವತ್ತೂರು ಗ್ರಾ.ಪಂ.ಸದಸ್ಯರಾದ ಶುಭಕರ ಶೆಟ್ಟಿ, ದಯಾನಂದ ಎರ್ಮೆನಾಡು, ಮಾಲತಿ, ಕಲ್ಯಾಣಿ, ಶ್ರೀ ಕ್ಷೇ.ಧ.ಗ್ರಾ.ಯೋಜನೆ, ವಗ್ಗ ವಲಯ ಮೇಲ್ವಿಚಾರಕಿ ಅಶ್ವಿನಿ, ಡಾ.ಶಿವರಾಜ್ ಶಿಂಧೆ, ನಿವೃತ್ತ ಶಿಕ್ಷಕಿ ವಸಂತಿ ಜಿ.ಕೆ.ಭಟ್,ಪ್ರಗತಿಪರ ಕೃಷಿಕ ಶ್ರೀನಿವಾಸ ಶೆಣೈ ಕೂಡಿಬಲು, ಶಿಕ್ಷಕ ಸುನಿಲ್ ಸಿಕ್ವೆರಾ, ಸತೀಶ್ ಕರ್ಕೇರ, ಗಣೇಶ್ ಶೆಟ್ಟಿ ಸೇವಾ,  ಮತ್ತಿತರರು ಉಪಸ್ಥಿತರಿದ್ದರು.  
 

ಈ ಸಂದರ್ಭದಲ್ಲಿ ನಿವೃತ್ತ ಅರ್ಚಕ ರಾಘವೇಂದ್ರ ಕುಂಞಣ್ಣಾಯ ಅವರನ್ನು ಶಾಸಕರು ಸಮ್ಮಾನಿಸಿದರು. ಪಿಲಾತಬೆಟ್ಟು ವ್ಯ.ಸೇ.ಸ.ಸಂಘದ ಅಧ್ಯಕ್ಷ ಕೆ.ಲಕ್ಷ್ಮೀ ನಾರಾಯಣ ಉಡುಪ ಅವರು ಸ್ವಾಗತಿಸಿ, ಪ್ರಸ್ತಾವಿಸಿದರು. ದೀಕ್ಷಿತ್ ಚೌಟ ವಂದಿಸಿದರು. ಶಿವರಾಜ್ ಗಟ್ಟಿ ಮತ್ತು ಅಕ್ಷಯ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.  

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter