ಕೈಕಂಬ: ಸರಕಾರಿ ಪದವಿ ಪೂರ್ವ ಕಾಲೇಜು ಗುರುಪುರದಲ್ಲಿ ಜು.23ರಂದು ಶನಿವಾರ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು. ಯಶವಂತ ಆಳ್ವ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಶಾಂತ್ ಹೆಚ್ ದೈಹಿಕ ಶಿಕ್ಷಕರು ಹೋಲಿ ಫ್ಯಾಮಿಲಿ ಬಜ್ಪೆ ಇವರು ವಿದ್ಯಾರ್ಥಿಗಳಿಗೆ ನಾಯಕತ್ವದ ಬಗ್ಗೆ ಮಾಹಿತಿ ನೀಡಿದರು.

ಶ್ರೀ ಚಂದ್ರಶೇಖರ ಪ್ರಾಂಶುಪಾಲರು ಸ್ವಾಗತಿಸಿದರು. ಇತಿಹಾಸ ಉಪನ್ಯಾಸಕರಾದ ಶ್ರೀ ಕೇಶವ ಪೂಜಾರಿ ಅವರು ಪ್ರಮಾಣ ವಚನ ಬೋಧಿಸಿದರು. ಕಾಲೇಜು ನಾಯಕನಾದ ಚಿಂತನ್ ಶೆಟ್ಟಿಗಾರ್ ವಂದಿಸಿದರು.





ಈ ಸಂದರ್ಭದಲ್ಲಿ ಕೂಸಪ್ಪ ಮಾಸ್ತರ್, ನರಸಿಂಹ ಪೂಜಾರಿ , ಜಲಜ ಸಮಿತಿಯ ಸದಸ್ಯರು, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾದ ಬಾಬು,ಪ್ರಾಥಮಿಕ ಮುಖ್ಯ ಶಿಕ್ಷಕಿ ಜಯಶ್ರೀ ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ಹರ್ಷಿತ ಕಾರ್ಯಕ್ರಮ ನಿರೂಪಿಸಿದರು.
