ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ವಿದ್ಯಾರ್ಥಿ ಸರ್ಕಾರದ ಉದ್ಘಾಟನೆ ಹಾಗೂ ವನಮಹೋತ್ಸವ ಕಾರ್ಯಕ್ರಮ
ಕೈಕಂಬ : ವಾಮಂಜೂರು ಮಂಗಳಜ್ಯೋತಿಯ ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ಜು.23ರಂದು ಶನಿವಾರ(ಜು. ೨೩) ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿವಿಧ ಶೈಕ್ಷಣಿಕ ವಿದ್ಯಾರ್ಥಿ ಸಂಘ, ವಿದ್ಯಾರ್ಥಿ ಸರ್ಕಾರದ ಉದ್ಘಾಟನೆ ಹಾಗೂ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ರೋ. ಸಿ. ಎ. ಹರೀಶ್ ಶೆಟ್ಟಿ ಮಾತನಾಡಿ, ಶಾಲಾ ಸರ್ಕಾರದ(ಮಂತ್ರಿ ಮಂಡಲ) ಅನುಭವ ನಿಮ್ಮ ಜೀವನದ ಮೇಲೆ ಬರಲಿದೆ. ವಿದ್ಯಾರ್ಥಿ ಜೀವನದಲ್ಲಿ ಸಿಗುವ ಇಂತಹ ಹತ್ತು ಹಲವಾರು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತಾಧಿಕಾರಿ ಗಣೇಶ್ ಭಟ್ ಬಿ. ಮಾತನಾಡಿ, ಅಧಿಕಾರವೆಂದರೆ ಜವಾಬ್ದಾರಿಯಾಗಿದ್ದು, ಮಕ್ಕಳು ಈ ಹಂತದಲ್ಲೇ ಅದನ್ನು ತಿಳಿದುಕೊಂಡಲ್ಲಿ, ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂದರು.
ರೋ. ಸದಾಶಿವ ಶೆಟ್ಟಿ, ರೋ. ಆನಂದ ಶೆಟ್ಟಿ ಮಾತನಾಡಿದರು. ವಿದ್ಯಾರ್ಥಿ ಮಂತ್ರಿಮAಡಲ ಮತ್ತು ವಿಪಕ್ಷ ಸದಸ್ಯ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಮುಖ್ಯ ಶಿಕ್ಷಕ ರಮೇಶ್ ಆಚಾರ್ಯ ಮತ್ತು ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಮಾರಿಯೆಟ್ ಮಸ್ಕರೇನಸ್ ಪ್ರಮಾಣವಚನ ಬೋಧಿಸಿದರು.
ರೋ. ವಿನ್ಸೆಂಟ್ ನಝ್ರತ್, ರೋ. ಕಲ್ಲೂರಾಯ, ರೋ. ಪ್ರಮೋದ್ ಕುಮಾರ್, ಶರತ್ ಆಚಾರ್ಯ, ನಾರಾಯಣ ಶೆಟ್ಟಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ರುಬೀನಾ ಎಸ್, ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕ ಸಚಿನ್ ಹಾಗೂ ಯೋಗ ಶಿಕ್ಷಕ ಶೇಖರ ಕಡ್ತಲ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ದೀಕ್ಷಿತಾ ವಂದಿಸಿದರು.