ಬಿ.ಸಿ.ರೋಡು: ಎಸಿಬಿ ಸಾರ್ವಜನಿಕ ಸಭೆ
ಬಂಟ್ವಾಳ: ಭ್ರಷ್ಟಾಚಾರ ನಿಗ್ರಹ ದಳ ವ್ಯಾಪ್ತಿಗೆ ಬರುವ ಕೆಲಸ ಮಾತ್ರ ನಮಗೆ ಮಾಡಲು ಸಾಧ್ಯವಿದೆ. ಸರ್ಕಾರಿ ಆಡಳಿತಾತ್ಮಕ ವಿಚಾರಕ್ಕೆ ಬದಲಾಗಿ ಅವರು ಸಾರ್ವಜನಿಕ ಸೇವೆಗೆ ಲಂಚ ಮತ್ತಿತರ ಬೇಡಿಕೆ ಮಂಡಿಸಿದಾಗ ನಮಗೆ ದೂರು ನೀಡಿದಲ್ಲಿ ತನಿಖೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಸಿಬಿ ಎಸ್ಪಿ ಸೈಮಂಡ್ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಎಸಿಬಿ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ವಿಶೇಷ ಕಾನೂನು ಅಧಿಕಾರಿ ಜುಡಿತ್ ಓಲ್ಗಾ, ಇನ್ಸ್ ಪೆಕ್ಟರ್ ಶ್ಯಾಮಸುಂದರ್, ಹರಿಸಪ್ರಸಾದ್, ಉಮೇಶ್ ಮತ್ತಿತರರು ಇದ್ದರು.