ಬಂಟ್ವಾಳ: ತಾಲ್ಲೂಕಿನ ಸಜಿಪಮೂಡ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಮತ್ತು ಪ್ರೆರಣಾ ಮಾಹಿತಿ ಶಿಬಿರ‘ ಕಾರ್ಯಕ್ರಮಕ್ಕೆ ಸಮಿತಿ ಗೌರವಾಧ್ಯಕ್ಷ ಕೆ.ಸಂಜೀವ ಪೂಜಾರಿ ಚಾಲನೆ ನೀಡಿದರು.


ಸಜಿಪಮೂಡ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಮತ್ತು ಪ್ರೆರಣಾ ಮಾಹಿತಿ ಶಿಬಿರ’ ಕಾರ್ಯಕ್ರಮಕ್ಕೆ ಸಮಿತಿ ಗೌರವಾಧ್ಯಕ್ಷ ಕೆ.ಸಂಜೀವ ಪೂಜಾರಿ ಚಾಲನೆ ನೀಡಿ ಶುಭ ಹಾರೈಸಿದರು.

ಶ್ರೀಗುರು ಕ್ರೆಡಿಟ್ ಸೊಸೈಟಿ ಉಪಾಧ್ಯಕ್ಷ ರಮೇಶ್ ಅನ್ನಪ್ಪಾಡಿ, ನಿರ್ದೇಶಕ ರತ್ನಾಕರ ಪೂಜಾರಿ ನಾಡಾರ್, ಸೇವಾ ಸಮಿತಿ ಉಪಾಧ್ಯಕ್ಷ ಮೋಹನದಾಸ್ ಪೂಜಾರಿ ಬೊಳ್ಳಾಯಿ, ಕೋಶಾಧಿಕಾರಿ ಶೈಲೇಶ ಪೂಜಾರಿ ಕುಚ್ಚಿಗುಡ್ಡೆ, ಉಪಸಮಿತಿ ಅಧ್ಯಕ್ಷ ತಾರಾನಾಥ ಪೂಜಾರಿ, ಗೋಪಾಲಕೃಷ್ಣ ಪೂಜಾರಿ ನಾಗನವಳಚ್ಚಿಲು, ದುರ್ಗಾಪ್ರಕಾಶ್ ಶಾರದನಗರ ಇದ್ದರು.

ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಸಹಪ್ರಾಧ್ಯಾಪಕಿ ಡಾ.ಮಧುಮಾಲ ಕೆ. ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಸೇವಾ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ ಸ್ವಾಗತಿಸಿ, ಪ್ರಶಾಂತ್ ಕಂದೂರು ವಂದಿಸಿದರು.

By Suddi9

Leave a Reply

Your email address will not be published. Required fields are marked *