ಬಡಗಕಜೆಕಾರು: ಗುಡ್ಡ ಕುಸಿತ ವೀಕ್ಷಣೆಗೆ ಗುಡ್ಡ ಹತ್ತಿದ ಮಾಜಿ ಸಚಿವ ರೈ
ಬಂಟ್ವಾಳ: ತಾಲ್ಲೂಕಿನ ಬಡಗಕಜೆಕಾರು ಗ್ರಾಮದ ಗುಂಡಿದೊಟ್ಟು ಎಂಬಲ್ಲಿ ಭೂ ಕುಸಿತದಿಂದ ಹಾನಿಗೀಡಾದ ಮನೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಬುಧವಾರ ಭೇಟಿ ನೀಡಿದರು.
ಬಡಗಕಜೆಕಾರು ಮತ್ತು ತೆಂಕಕಜೆಕಾರು ಗ್ರಾಮದ ಗುಂಡಿದೊಟ್ಟು ಮತ್ತಿತರ ಪ್ರದೇಶದಲ್ಲಿ ಗುಡ್ಡ ಕುಸಿತಕ್ಕೀಡಾದ ಮನೆಗಳಿಗೆ ತೆರಳಲು ಮಾಜಿ ಸಚಿವ ಬಿ.ರಮಾನಾಥ ರೈ ಬುಧವಾರ ಗುಡ್ಡ ಏರಿ ಗಮನ ಸೆಳೆದರು.
ಇಲ್ಲಿನ ನಿವಾಸಿ ಸುಂದರಿ ನಾಯ್ಕ್, ಅಂಬಡೆಮಾರು ನಿವಾಸಿ ದಿನೇಶ್ ಪೂಜಾರಿ ಇವರ ಮನೆ ಗೋಡೆ ಗುಡ್ಡ ಕುಸಿತದಿಂದ ಬಿರುಕು ಬಿಟ್ಟಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಕರೆ ಮಾಡಿ ಸೂಕ್ತ ಪರಿಹಾರಧನ ನೀಡುವಂತೆ ಅವರು ಆಗ್ರಹಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಉಪಾಧ್ಯಕ್ಷ ಸುಧಾಕರ್ ಶೆಣೈ ಖಂಡಿಗ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಸ್ಮಾ ಅಝೀಝ್, ಉಪಾಧ್ಯಕ್ಷ ಡೀಕಯ್ಯ ಬಂಗೇರ, ಕಾಂಗ್ರೆಸ್ ವಲಯಾಧ್ಯಕ್ಷ ಜಯ ಬಂಗೇರ, ಆನಂದ ಕರ್ಲ, ವಿಠಲ ಪೂಜಾರಿ ಕರ್ಲ, ವಾಸು ಪೂಜಾರಿ ಮಿತ್ತೋಟ್ಟು, ರಾಮಚಂದ್ರ ಪೂಜಾರಿ ನಾಡೆಲೊ ಮತ್ತಿತರರು ಇದ್ದರು.