ಪಾಣೆಮಂಗಳೂರು: ಹೆದ್ದಾರಿಯಲ್ಲಿ ಕಾಣಿಸಿಕೊಂಡ ಹೊಂಡ ಇಲ್ಲಿ ರಸ್ತೆ ಹುಡುಕಿಕೊಂಡು ಸಾಗಬೇಕು…!
ಬಂಟ್ವಾಳ: ತಾಲ್ಲೂಕಿನ ಪಾಣೆಮಂಗಳೂರು ಸತ್ಯಶ್ರೀ ಗುಡಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಿಕ್ಷಾ ಮತ್ತು ದ್ವಿಚಕ್ರ ವಾಹನ ಸವಾರರು ರಸ್ತೆ ಹುಡುಕಿಕೊಂಡು ಹೋಗುವಂತಾಗಿದೆ.
ಬಂಟ್ವಾಳ ಪಾಣೆಮಂಗಳೂರು ಸತ್ಯಶ್ರೀ ಗುಡಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರಂತರ ಮಳೆಗೆ ಕೃತಕ ಕೆರೆ ನಿರ್ಮಾಣಗೊಂಡು ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ. ಈಗಾಗಲೇ ಸೂರಿಕುಮೇರು- ಕಲ್ಲಡ್ಕ-ಮೆಲ್ಕಾರ್ ನಡುವೆ ಅಲ್ಲಲ್ಲಿ ಹೊಂಡ ಮತ್ತು ಹೆದ್ದಾರಿ ವಿಸ್ತರಣೆ ನೆಪದಲ್ಲಿ ಅಗೆದು ಹಾಕಿದ ಕೆಸರಿನಲ್ಲಿ ವಾಹನಗಳು ಹೂತು ಹೋಗಿ ಸಂಚಾರ ವ್ಯತ್ಯಯ ಮತ್ತು ಹಲವು ಅಪಘಾತಗಳಿಗೂ ಕಾರಣವಾಗಿದೆ.
ಇದೀಗ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನರಿಕೊಂಬು, ಬಾಳ್ತಿಲ, ಶಂಭೂರು ಮತ್ತಿತರ ಕಡೆಯಿಂದ ಪೇಟೆಗೆ ಬರುವ ವಾಹನ ಸವಾವರು ಮತ್ತು ಸ್ಥಳೀಯ ಸುಮಂಗಲಾ ಕಲ್ಯಾಣ ಮಂಟಪಕ್ಕೆ ತೆರಳುವ ಪಾದಚಾರಿಗಳಿಗೂ ಅಡ್ಡಿಯಾಗಿದೆ.
ಇದೇ ರಸ್ತೆಗೆ ತಾಗಿಕೊಂಡಂತೆ ಅಂಡರ್ ಪಾಸ್ ನಿರ್ಮಾಣ ಕಾಮಗಾರಿಯೂ ನಡೆಯುತ್ತಿದೆ. ಇಲ್ಲಿನ ರಿಕ್ಷಾ ಚಾಲಕರು ಮತ್ತು ದ್ವಿಚಕ್ರ ವಾಹನ ಸವಾರರು ರಸ್ತೆ ಹುಡುಕಿಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಆರೋಪಿಸಿದ್ದಾರೆ. ಈ ಹೊಂಡಮಯ ರಸ್ತೆಯಿಂದಾಗಿ ಸತ್ಯಶ್ರೀ (ಕಲ್ಲುರ್ಟಿ ದೈವ) ಗುಡಿಗೆ ಬರುವ ಭಕ್ತರಿಗೂ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಇಲ್ಲಿನ ದೈವಪಾತ್ರಿ ಉಮೇಶ ಸಪಲ್ಯ.