ಜು.೧೪ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಬಾಲಾಲಯ ಪ್ರತಿಷ್ಠೆ
ಕೈಕಂಬ: ಶ್ರೀ ಮುಖ್ಯಪ್ರಾಣ ದೇವಸ್ಥಾನ ಅಡ್ಡೂರು ಪೊನ್ನಂಗಿಲ ಇಲ್ಲಿಯ ಬಾಲಾಲಯ ಪ್ರತಿಷ್ಠೆ ಜು.೧೪ರಂದು ಗುರುವಾರ ಕೋಡಿಮಜಲು ಅನಂತಪದ್ಮನಾಭ ಉಪಾದ್ಯಾಯರ ನೇತೃತ್ವದಲ್ಲಿ ದೇವಳದ ಪ್ರದಾನ ಅರ್ಚಕರಾದ ಚಂದ್ರಶೇಖರ್ ಭಟ್ ನಡುಮನೆ ಇವರ ಉಪಸ್ಥಿತಿಯಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ಗೌರವಾಧ್ಯಕ್ಷರಾದ ಬಾಲಕೃಷ್ಣ ರಾವ್ ನೂಯಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಂದಾಡಿ ಧನಂಜಯ ಹೊಳ್ಳ, ಜೀಣೋದ್ಧಾರ ಸಮಿತಿ ಅಧ್ಯಕ್ಷ ರವಿಶಂಕರ್ ನೂಯಿ, ಕಾರ್ಯದರ್ಶಿ ವಿಶ್ವೇಶ್ವರ ಭಟ್, ಸೋಮಶೇಖರ್ ಪೊಳಲಿ, ಉದ್ಯಮಿಗಳಾದ ಚಂದ್ರಹಾಸ್ ಪಲ್ಲಿಪಾಡಿ, ಸುಭಾಸ್, ಚಿದಾನಂದ ಮತ್ತು ಸುಬ್ರಾಯ ಕಾರಂತ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.


