ಪೊಳಲಿ ರಾಮಕೃಷ್ಣ ತಪೋವನದಲ್ಲಿ ಗುರುಪೂರ್ಣಿಮೆ ಆಚರಣೆ
ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಗುರುಪೂರ್ಣಿಮೆಯನ್ನು ಜು.13ರಂದು ಬುಧವಾರ ಆಚರಿಸಲಾಯಿತು. ಬೆಳಿಗ್ಗೆ ಉಷಾ ಆರತಿಯ ನಂತರ ವಿಷ್ಣು ಸಹಸ್ರನಾಮ ಪಠಣ . ಬೆಳಿಗ್ಗೆ ಗಂಟೆ ೬ ರಿಂದ ೧೦ರ ತನಕ ವಿವಿಧ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು. ನಂತರ ರಾಮಕೃಷ್ಣ ಹೋಮವನ್ನು, ವಿದ್ಯಾರ್ಥಿ ಹೋಮವನ್ನು ಸ್ವಾಮಿವಿವೇಕಚೈತನ್ಯಾನಂದ ನೆರವೇರಿಸಿದರು. ಮಂಗಳಾರತಿಯ ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಗವದ್ಭಕ್ತರಿಗೆ ಪ್ರಸಾದ ವಿತರಿಸಲಾಯಿತು.








