ಗುರುಪುರ ಬಂಟರ ಮಾತೃ ಸಂಘ ಇದರ ವಾರ್ಷಿಕ ಮಹಾಸಭೆ
ಕೈಕಂಬ: ಗುರುಪುರ ಬಂಟರ ಮಾತೃ ಸಂಘ(ರಿ) ಇದರ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕ ಸಮಾವೇಶ ಜು. ೧೭ರಂದು ಭಾನುವಾರ ಮಧ್ಯಾಹ್ನ ೨ ಗಂಟೆಗೆ ವಾಮಂಜೂರಿನ ಚರ್ಚ್ ಸಭಾಭವನದಲ್ಲಿ ಜರುಗಲಿದೆ. ವಾರ್ಷಿಕ ಸಮಾವೇಶದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ. ೮೦ಕ್ಕಿಂತ ಅಧಿಕ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವವರಿಗೆ ಸನ್ಮಾನ(ಉಪೇಂದ್ರ ಶೆಟ್ಟಿ-ಶಿಕ್ಷಣ ಕ್ಷೇತ್ರ, ಸಂತೋಷ್ ಶೆಟ್ಟಿ ಇನ್ನ-ಸಾಮಾಜಿಕ ಕ್ಷೇತ್ರ, ಡಾ. ವಿನಯ ಮೋಹನ್ ಆಳ್ವ-ವೈದ್ಯಕೀಯ ಕ್ಷೇತ್ರ ಮತ್ತು ಭಾಸ್ಕರ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ-ಉದ್ಯಮ ಕ್ಷೇತ್ರ) ಮತ್ತು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಅಭಿನಂದನೆ ನಡೆಯಲಿದೆ.
ಸಂಜೆ ೪:೩೦ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಯವರು ಆರ್ಶೀವಚನ ನೀಡಲಿದ್ದಾರೆ. ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಹೊಸಲಕ್ಕೆ ಅಧ್ಯಕ್ಷತೆ ವಹಿಸಲಿದ್ದಾರೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟ(ರಿ) ಮಂಗಳೂರು ಇದರ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ದೀಪ ಬೆಳಗಿಸಲಿದ್ದಾರೆ.
ಬಂಟರ ಯಾನೆ ನಾಡವರ ಸಂಘ(ರಿ) ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಶಾಸಕ ಡಾ. ವೈ. ಭರತ್ ಶೆಟ್ಟಿ, ಉಪೇಂದ್ರ ಶೆಟ್ಟಿ(ಬೆಂಗಳೂರು ಬಂಟರ ಸಂಘದ ಅಧ್ಯಕ್ಷ), ಸಂತೋಷ್ ಶೆಟ್ಟಿ ಇನ್ನ(ಪೂನಾ ಬಂಟರ ಸಂಘದ ಅಧ್ಯಕ್ಷ), ಸುರೇಶ್ ಶೆಟ್ಟಿ ಗುರ್ಮೆ, ವಿಶ್ವನಾಥ ಶೆಟ್ಟಿ ಕರ್ನಿರೆ, ಜಯಕರ ಶೆಟ್ಟಿ ಇಂದ್ರಾಳಿ, ಕರುಣಾಕರ ಶೆಟ್ಟಿ ಮುಂಬೈ, ಅಶೋಕ್ ಶೆಟ್ಟಿ ಮುಂಬೈ, ರಾಜೇಂದ್ರ ಶೆಟ್ಟಿ ಹುಬ್ಬಳ್ಳಿ, ವೇಣುಗೋಪಾಲ ಎಲ್. ಶೆಟ್ಟಿ ಥಾಣೆ, ರವಿರಾಜ ಶೆಟ್ಟಿ ನಿಟ್ಟೆಗುತ್ತು, ಚಂದ್ರಹಾಸ ಶೆಟ್ಟಿ ಬಂಟ್ವಾಳ, ಮಧುಕರ ಶೆಟ್ಟಿ ಬೆಂಗಳೂರು, ಪ್ರವೀಣ್ ಶೆಟ್ಟಿ ಬೆಂಗಳೂರು, ಕುಶಾಲ್ ಸಿ. ಭಂಡಾರಿ ಥಾಣೆ, ರವೀಂದ್ರ ಎಲ್. ಶೆಟ್ಟಿ ಭಿವಂಡಿ-ಡೊಂಬಿವಲಿ, ಉಲ್ಲಾಸ್ ಶೆಟ್ಟಿ ಪೆರ್ಮುದೆ, ಸುಧಾಕರ ಪೂಂಜ ಸುರತ್ಕಲ್, ಬಾಬು ಶೆಟ್ಟಿ ಬಜ್ಪೆ, ಗೋಕುಲದಾಸ್ ಶೆಟ್ಟಿ ಪಡುಪಳ್ಳಿ ಭಾಗವಹಿಸಲಿದ್ದಾರೆ. ಸಂಘದ ವ್ಯಾಪ್ತಿಗೊಳಪಟ್ಟ ವಿವಿಧ ಗ್ರಾಮಗಳ ಸದಸ್ಯರಿಂದ ನೃತ್ಯ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.