ಗೂಡಿನಬಳಿ: ಗುಡ್ಡ ಕುಸಿತ, ರಸ್ತೆ -ಮನೆಗಳಿಗೆ ಹಾನಿ
ಬಂಟ್ವಾಳ: ತಾಲ್ಲೂಕಿನ ಪುರಸಭಾ ವ್ಯಾಪ್ತಿಯ ಗೂಡಿನಬಳಿ ಸಮೀಪದ ಟಿಪ್ಪು ರಸ್ತೆ ಎಂಬಲ್ಲಿ ಗುಡ್ಡ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಲ್ಲಿನ ಪುರಸಭಾ ವ್ಯಾಪ್ತಿಯ ಗೂಡಿನಬಳಿ ಸಮೀಪದ ಟಿಪ್ಪು ರಸ್ತೆ ಎಂಬಲ್ಲಿ ಮಳೆಗೆ ಗುಡ್ಡ ಕುಸಿದು ಕೆಳ ಭಾಗದ ಹಲವು ಮನೆಗಳಿಗೆ ಹಾನಿಯಾಗುವ ಭೀತಿ ಎದುರಾಗಿದೆ. ಇಲ್ಲಿನ ಸಂಪರ್ಕ ರಸ್ತೆಯೂ ಕಡಿತಗೊಂಡಿದ್ದು, ಸ್ಥಳೀಯ ೨೫ಕ್ಕೂ ಮಿಕ್ಕಿ ಮನೆಗಳಿಗೆ ತೊಂದರೆಯಾಗಿದೆ.
ಇದೇ ರೀತಿ ಭೂ ಕುಸಿತ ಮುಂದುವರಿದರೆ ಮತ್ತೆ ೨೭ ನೇ ವಾರ್ಡಿನಲ್ಲಿ ಕುಡಿಯುವ ನೀರಿನ ಸಂಪರ್ಕವೂ ಸ್ಥಗಿತಗೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇಲ್ಲಿ ತಡೆಗೋಡೆ ನಿರ್ಮಿಸಲು ಶಾಸಕರು ಮತ್ತು ಜಿಲ್ಲಾಧಿಕಾರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ಪುರಸಭಾ ಸದಸ್ಯೆ ಝೀನತ್ ಫೈರೋಝ್ ತಿಳಿಸಿದ್ದಾರೆ.