ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಸುದರ್ಶನ ಪೂಜೆ
ಕೈಕಂಬ: ಶ್ರೀ ಮುಖ್ಯಪ್ರಾಣ ದೇವಸ್ಥಾನ ಅಡ್ಡೂರು ಪೊನ್ನಂಗಿಲ ಇಲ್ಲಿಯ ದೇವಸ್ಥಾನವು ಜೀರ್ಣೋದ್ಧಾರಗೊಳ್ಳಲಿದ್ದು ಜು.೧೪ರಂದು ಗುರುವಾರ ಬಾಲಾಲಯ ಪ್ರತಿಷ್ಠೆ ನಡೆಯಲಿದೆ.
ಜು.12ರಂದು ಮಂಗಳವಾರ ಕೋಡಿಮಜಲು ಅನಂತಪದ್ಮನಾಭ ಉಪಾದ್ಯಾಯರ ನೇತೃತ್ವದಲ್ಲಿ ದೇವಳದ ಪ್ರದಾನ ಅರ್ಚಕರಾದ ಚಂದ್ರಶೇಖರ್ ಭಟ್ ನಡುಮನೆ ಇವರ ಉಪಸ್ಥಿತಿಯಲ್ಲಿ ಸುದರ್ಶನ ಪೂಜೆ, ಭಾದೆ ಉಚ್ಚಾಟನೆ, ಪ್ರಾಸಾಧ ಶುದ್ದಿ , ವಾಸ್ತು ಪೂಜೆ, ಇಂಧ್ರಾದೀದಿಗ್ಬಲಿ, ಪ್ರಸನ್ನ ಪೂಜೆ ಮತ್ತು ಪ್ರಸಾದ ವಿತರಣೆ ಹಾಗೂ ಪೂಜಾವಿಧಿವಿಧಾನಗಳು ನಡೆಯಿತು.
ಈ ಸಂಧರ್ಭದಲ್ಲಿ ಗೌರವಾಧ್ಯಕ್ಷರಾದ ಬಾಲಕೃಷ್ಣ ರಾವ್ ನೂಯಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಂದಾಡಿ ಧನಂಜಯ ಹೊಳ್ಳ, ಜೀಣೋದ್ಧಾರ ಸಮಿತಿ ಅಧ್ಯಕ್ಷ ರವಿಶಂಕರ್ ನೂಯಿ, ಕಾರ್ಯದರ್ಶಿ ವಿಶ್ವೇಶ್ವರ ಭಟ್ ಮತ್ತು ಸುಬ್ರಾಯ ಕಾರಂತ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.