ಶ್ರೀ ರಾಮ ಮಂದಿರ ಟ್ರಸ್ಟ್ ಎಡಪದವು ಇದರ ವತಿಯಿಂದ ವಿದ್ಯಾರ್ಥಿ ವೇತನಾ ವಿತರಣಾ ಕಾರ್ಯಕ್ರಮ
ಕೈಕಂಬ: ಶ್ರೀ ರಾಮ ಮಂದಿರ ಟ್ರಸ್ಟ್ ಎಡಪದವು ಇದರ ವತಿಯಿಂದ ಜು.08ರಂದು ಶುಕ್ರವಾರ ಸಂಜೆ 5 ಗಂಟೆಗೆ ದೀಪ ಬೆಳಗಿಸಿ ವಿದ್ಯಾರ್ಥಿ ವೇತನಾ ವಿತರಣಾ ಕಾರ್ಯಕ್ರಮ ಪಟ್ಟಾಭಿರಾಮ ಸಭಾ ಭವನದಲ್ಲಿ ಶ್ರೀ ಗೋಪಾಲ ಗೌಡ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ವೇದಿಕೆಯಲ್ಲಿ ಶ್ರೀ ನವೀನ್ ಕುಮಾರ್ ಹೊಸ ಮನೆ, ಶ್ರೀ ಗೋಪಾಲ ಕಾರಂತ, ಶ್ರೀ ಸುಬ್ರಹ್ಮಣ್ಯ ಕೊಂದೋಡಿ, ಶ್ರೀ ಪದ್ಮನಾಭ , ಶ್ರೀ ವಿಜಯ ಗೌಡ ಶಿಬ್ರಿ ಕೆರೆ, ಶ್ರೀ ಸುಕುಮಾರ ದೇವಾಡಿಗ ಅವರು ಉಪಸ್ಥಿತರಿದ್ದರು.. ಪ್ರಾರ್ಥನೆ ಶ್ರೀ ಸುಬ್ರಹ್ಮಣ್ಯ ರಾವ್ ಕೋರ್ಡೆಲ್, ಸ್ವಾಗತ ಭಾಷಣ ಶ್ರೀ ಬಾಲಕೃಷ್ಣ ಶೆಟ್ಟಿ, ಕಾರ್ಯಕ್ರಮ ನಿರೂಪಣೆ ಶ್ರೀ ಚಂದ್ರ ಶೇಖರ್ ಎಸ್ ನೆರವೇರಿಸಿದರು. ಧನ್ಯವಾದ ಸಮರ್ಪಣೆ ಶ್ರೀ ಕುಶಾಲ್ ಕುಮಾರ್ ರವರು ಮಾಡಿದರು.