ಬಂಟ್ವಾಳ: ನೆರೆ ಇಳಿಮುಖ ಕೆಲವೆಡೆ ಮಳೆಹಾನಿ
ಬಂಟ್ವಾಳ: ತಾಲ್ಲೂಕಿನ ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಜು.08ರಂದು ಗುರುವಾರ ಸಂಜೆ ನೆರೆ ನೀರಿನ ಮಟ್ಟ ೭.೨ಮೀಟರಿಗೆ ಇಳಿಕೆಯಾಗಿದೆ. ನೇತ್ರಾವತಿ ನದಿಯಲ್ಲಿ ಗುರುವಾರ ಬೆಳಿಗ್ಗೆ ೮ ಮೀ. ಎತ್ತರ ತಲುಪಿದ್ದ ನೀರಿ ಮಟ್ಟ ಸಂಜೆ ವೇಳೆಗೆ ೭.೨ಮೀಟರಿಗೆ ಇಳಿಕೆಯಾಗಿದೆ. ಕೆಲವೆಡೆ ಮಳೆಹಾನಿ ಮುಂದುವರಿದಿದ್ದು, ಕೊಯಿಲ ಗ್ರಾಮದ ಕೈತ್ರೋಡಿ ನಿವಾಸಿ ಸರೋಜಿನಿ ಚೆನ್ನಪ್ಪ ಪೂಜಾರಿ ಮನೆ ಹಾನಿಗೀಡಾಗಿದೆ.
ವಿಟ್ಲ ಕಸಬಾ ಗ್ರಾಮದ ಸರೋಜಿನಿ ತಿಮ್ಮಪ್ಪ ನಲಿಕೆ, ಸಜಿಪಮೂಡ ಗ್ರಾಮದ ಸುಂದರಿ ಕಾಂತಪ್ಪ ಪೂಜಾರಿ ಇವರ ಮನೆಗೆ ಹಾನಿಯಾಗಿದೆ. ಕೇಪು ಗ್ರಾಮದ ಮೈರ ನಿವಾಸಿ ಗಣೇಶ ಭಂಡಾರಿ ಇವರ ಹಟ್ಟಿ, ಬಿಳಿಯೂರು ಗ್ರಾಮದ ನಸೀಮಾ ಸಿದ್ದಿಕ್ ಮತ್ತು ಬಿ.ಕಸಬಾ ಗ್ರಾಮದ ಅಪ್ಪಿ ಆಚಾರಿ ಇವರ ಮನೆ ಹಾನಿಗೀಡಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.