ಅದ್ಯಪಾಡಿ ಗ್ರಾಮದ ರಸ್ತೆ ಕುಸಿದ ಹಾಗೂ ಗುಡ್ಡೆ ಕುಸಿತ
ಕೈಕಂಬ: ದಕ್ಷಿಣ ಕನ್ನಡ ಜಿಲ್ಲೆಯ ‘ಮಂಗಳೂರು ತಾಲೂಕಿನ ಕಂದಾವರ ಪಂಚಾಯತ್ ವ್ಯಾಪ್ತಿಯ ಅದ್ಯಪಾಡಿ ಗ್ರಾಮದ ರಸ್ತೆ ಕುಸಿದ ಹಾಗೂ ಗುಡ್ಡೆ ಕುಸಿತವಾದ ಸ್ಥಳಕ್ಕೆ ಕರ್ನಾಟಕ ಸರಕಾರದ ಕಂದಾಯ ಸಚಿವರಾದ R. ಅಶೋಕ್, ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್, ಶಾಸಕರಾದ ಡಾ. Y ಭರತ್ ಶೆಟ್ಟಿಯವರು DC ಹಾಗೂ ಇತರ ಸರಕಾರಿ ಅಧಿಕಾರಿಗಳೊಂದಿಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.
ಆದಷ್ಟು ಶೀಘ್ರ ಅಂದರೆ 4-5 ದಿನಗಳಲ್ಲಿ ಈ ರಸ್ತೆಯನ್ನು ಮತ್ತೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಲ್ಲಿ ಸೂಚಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಮೇಶ್ ಮೂಲ್ಯ ‘ಭುಜಂಗ ಕುಲಾಲ್’ ಕುಮಾರ್ ಶೆಟ್ಟಿ, ಜಯರಾಮ ಪೂಜಾರಿ ಚಂದ್ರಹಾಸ ದೇವಾಡಿಗ, ಶೋಧನ್ ಅದ್ಯಪಾಡಿ ‘ಯಾದವ ಅರ್ಬಿ’ ನವೀನ ಕುಲಾಲ್ ಸುರೇಶ್ ಪೂಜಾರಿ,ಯತೀಶ್ ಕುಮಾರ್ ಹಾಗೂ ಪಂಚಾಯತ್ ಸದಸ್ಯರುಗಳಾದ ಶಾಂಭವಿ, ನಾಗೇಶ್ ಕುಲಾಲ್ ಹಾಗೂ ಗ್ರಾಮಸ್ಥರು ಜೊತೆಗಿದ್ದರು