ಬೆಳ್ಳೂರು ಸಹಕಾರಿ ಸಂಘದ ಕರುಣಾಕರ ಶೆಟ್ಟಿ ಗುಂಡಾಲ ಗುತ್ತು ಚಂದಪ್ಪ ನಾಯ್ಕ್ ಅವರ ಬೀಳ್ಕೋಡುಗೆ ಸಮಾರಂಭ
ಬಡಗ ಬೆಳ್ಳೂರು: ಸಹಕಾರಿ ಸಂಘದಲ್ಲಿ ಕಳೆದ 35 ವರ್ಷಗಳಿಂದ ಸೇವೆ ಸಲ್ಲಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿವೃತ್ತಿ ಹೊಂದಿದ ಕರುಣಾಕರ ಶೆಟ್ಟಿ ಗುಂಡಾಲ ಗುತ್ತು ಹಾಗೂ ಪುಣಚ ಪ್ರಾಥಮಿಕ ವ್ಯವಸಾಯ ಸಹಕಾರಿ ಸೇವ ಸಂಘದ ಲ್ಲಿ 42 ವರ್ಷಗಳಿಂದ ಸಲ್ಲಿಸಿ ಮುಖ್ಯ ಕಾರ್ಯನಿರ್ವಾಹಕರಾಗಿ ನಿವೃತ್ತಿ ಹೊಂದಿದ ಚಂದಪ್ಪ ನಾಯ್ಕ್ ಅವರ ಬೀಳ್ಕೋಡುಗೆ ಸಮಾರಂಭ ಮುಖ್ಯ ಕಾರ್ಯನಿರ್ವಣಾಧಿಕಾರಿಗಳ ಒಕ್ಕೂಟದ ವತಿಯಿಂದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಬಿಸಿರೋಡು ಶಾಖೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ರಾಜಾರಾಮ್ ಭಟ್ ವಹಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಹಕಾರಿ ಸಂಘಗಳು ಕಷ್ಟಕರ ಪರಿಸ್ಥಿತಿಯಲ್ಲಿ ಸಂಘವನ್ನು ಮುನ್ನೆಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ . ಸಹಕಾರದಿಂದ ಕೆಲಸ ಮಾಡಿದಾಗ ಮಾತ್ರ ಸಹಕಾರಿ ಸಂಘಗಳು ಎತ್ತರಕ್ಕೆ ಬೆಳೆಯುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರು ವಿಭಾಗದ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಸುದೀರ್ ಕುಮಾರ್, ಡಿ.ಸಿ.ಸಿ.ಬ್ಯಾಂಕ್ ಉಪಮಹಾಗರಬಂಧಕ ಅಶೋಕ್ ಕುಮಾರ್, ಸಹಕಾರ ಅಭಿವೃದ್ಧಿ ಅಧಿಕಾರಿ ಗೋಪಾಲ ಎನ್.ಜೆ, ಶಾಖಾ ವ್ಯವಸ್ಥಾಪಕರಾದ ಸೌಮ್ಯ, ವಲಯ ಮೇಲ್ವಿಚಾರಕರುಗಳಾದ ಕೇಶವ ಕಿಣಿ ಹೆಚ್ , ಯೋಗೀಶ್ ಎಚ್ ಹಾಗೂ ತಾಲೂಕಿನ ಎಲ್ಲಾ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಣಾಧಿಕಾರಿಗಳು ಉಪಸ್ಥಿತರಿದ್ದರು. ಉಪಸ್ಥಿತರಿದ್ದರು. ಒಕ್ಕೂಟದ ಅಧ್ಯಕ್ಷ ಸುಧಾಕರ ಶೆಟ್ಟಿ ಸ್ವಾಗತಿಸಿ, ಒಕ್ಕೂಟದ ಉಪಾಧ್ಯಕ್ಷ ಅಲ್ಬೆರ್ಟ್ ಡಿ.ಸೋಜ ವಂದಿಸಿದರು.