ಬಂಟ್ವಾಳ: ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಶಾಂತಿಅಂಗಡಿ ಪೊನ್ನೋಡಿ ಎಂಬಲ್ಲಿ ಸ್ಥಳೀಯ ನಿವಾಸಿ ಮಹಮ್ಮದ್ ಆಸಿಫ್ (೨೭) ಎಂಬಾತನನ್ನು ಜು.04ರಂದು ಸೋಮವಾರ ತಡರಾತ್ರಿ ಇಬ್ಬರು ಯುವಕರು ಕ್ಷುಲ್ಲಕ ಕಾರಣಕ್ಕೆ ಹತ್ಯೆ ನಡೆಸಿದ್ದಾರೆ.5btl-Mohmd. Ashif

ಆರೋಪಿಗಳಾದ ಮಾರಿಪಳ್ಳ ನಿವಾಸಿಗಳಾದ ಮಹಮ್ಮದ್ ನೌಫಾಲ್ ಮತ್ತು ಮಹಮ್ಮದ್ ನೌಸೀರ ಎಂಬವರನ್ನು ನಗರ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಹಿಂದೆ ಆರೋಪಿಗಳನ್ನು ನೋಡಿ ಸ್ಕೂಟರ್ ಹಾರನ್ ಹಾಕುತ್ತಿದ್ದ ಬಗ್ಗೆ ಮೃತ ಮಹಮ್ಮದ್ ಆಸಿಫ್ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿತ್ತು. ಇದೇ ವೈಷಮ್ಯದಿಂದ ಸೋಮವಾರ ತಡರಾತ್ರಿ ಪೊನ್ನೋಡಿ ಹೋಟೆಲೊಂದರ ಬಳಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *