ಕಾಜಿಲ ಮನೆಗೆ ತೆಂಗಿನಮರ ಬಿದ್ದು ಮನೆ ಜಖಂ
ಕೈಕಂಬ: ಜು.೦೪ರಂದು ಸೊಮವಾರ ಸುರಿದ ಭಾರಿ ಮಳೆ, ಗಾಳಿಗೆ ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕುಳಿಪಾಡಿ ಗ್ರಾಮದ ಕಾಜಿಲ ಎಂಬಲ್ಲಿ ಸುಶೀಲಾ ಪೂಜಾರ್ತಿ ಎಂಬವರ ಮನೆಗೆ ತೆಂಗಿನ ಮರ ಬಿದ್ದು ಮನೆ ಜಖ0 ಗೊಂಡಿದ್ದು ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ. ಪಂಚಾಯತ್ ಅಧ್ಯಕ್ಷರು, ಗ್ರಾಮಕರಣಿಕರು, ಪಿಡಿಓ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಲಿಪಾಂಜಾರ ಎಂಬಲ್ಲಿ ಖಾಸಗಿಯವರು ಜಾಗ ಸಮತಟ್ಟು ಮಾಡಿದ ಪರಿಣಾಮ ಮಳೆ ನೀರು ಹರಿಯಲು ಅಡಚಣೆ ಉಂಟಾಗಿ ಕುಪ್ಪೆಪದವು- ಬಂಟ್ವಾಳ ರಾಜ್ಯ ಹೆದ್ದಾರಿ ಕೆರೆಯಂತಾಗಿದ್ದು ಕೆಸರು ನೀರಿನಿಂದಾಗಿ, ವಾಹನ ಮತ್ತು ಜನರ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.