ಬೆಳ್ಳೂರು ವಲಯ ಬಂಟರ ಸಂಘದ ಕಾರ್ಯಕಾರಿ ಸಮಿತಿ ಸಭೆ
ಬಡಗಬೆಳ್ಳೂರು: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಬಂಟರ ಸಂಘದ ಬೆಳ್ಳೂರು ವಲಯದ ಕಾರ್ಯಕಾರಿ ಹಾಗೂ ಬಡಗಬೆಳ್ಳೂರು ಗ್ರಾಮ ಸಮಿತಿಯ ಸಭೆಯು ಭಾನುವಾರ ಗುಂಡಾಲಗುತ್ತು ಜುಮಾದಿ ಬಂಟ ದೈವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಕೆ.ಜನಾರ್ಧನ ಶೆಟ್ಟಿ ವಹಿಸಿದ್ದರು. ಆ.7 ರಂದು ಭಾನುವಾರ ತುಳುನಾಡಿನಲ್ಲಿ ನಡೆಯುವ ವಿಶೇಷ ಆಚರಣೆ ಆಟ, ಕೂಟದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿ.ಎಸೆಸಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಬಗ್ಗೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಮನೆ ಕಟ್ಟಿ ಕೊಡುವ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಯಿತು.ಸಂಘದ ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘದ ಕಟ್ಟಡಕ್ಕೆ ಜಾಮೀನು ಖರೀದಿಸುವ ಬಗ್ಗೆ ಅಧ್ಯಕ್ಷರು. ಅಭಿಪ್ರಾಯ ಸಭೆಯಲ್ಲಿ ತಿಳಿಸಿದರು.ಸಂಘದ ಕೋಶಾಧಿಕಾರಿ ಕರುಣಾಕರ ಶೆಟ್ಟಿ ಸ್ವಾಗತಿಸಿ. ಸಂಘಟನಾ ಕಾರ್ಯದರ್ಶಿ ಸುಧೀರ್ ಪೂಂಜ ವಂದಿಸಿದರು.