ಉಳಾಯಿಬೆಟ್ಟು ಪಂ.ನಲ್ಲಿ ೫೫ ಲ. ರೂ ವೆಚ್ಚದ ನೂತನ ರಸ್ತೆ, ಶೌಚಾಲಯ, ಕಿರು ಸೇತುವೆಗಳ ಉದ್ಘಾಟಿಸಿದ ಡಾ. ಭರತ್ ಶೆಟ್ಟಿ
ಕೈಕಂಬ: ಉಳಾಯಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರ್ಕಾರದ ವಿವಿಧ ಕಾರ್ಯಕ್ರಮಗಳ ಒಟ್ಟು ೫೫ ಲಕ್ಷ ರೂ ಅನುದಾನದಲ್ಲಿ ನಡೆದಿರುವ ರಸ್ತೆ ಕಾಂಕ್ರೀಟೀಕರಣ, ರಸ್ತೆ, ನೂತನ ಶೌಚಾಲಯ, ಕಿರುಸೇತುವೆ ಕಾಮಗಾರಿ ಉದ್ಘಾಟಿಸಿದ ಶಾಸಕ ಡಾ. ಭರತ್ ಶೆಟ್ಟಿಯವರು, ಸುಮಾರು ೧೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.
ಕಾಯರ್‌ಪದವಿನಲ್ಲಿ ೧೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆ ಉದ್ಘಾಟಿಸಿ, ಅಲ್ಲೇ ೧೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು. ಪೆರ್ಮಂಕಿ ಪದವಿನಲ್ಲಿ ೯ ಲಕ್ಷ ರೂ ವೆಚ್ಚದ ಕಾಂಕ್ರೀಟ್ ರಸ್ತೆ, ಪೆರ್ಮಂಕಿ ಸುದರ್ಶನ ಶೆಟ್ಟಿಯವರ ಮನೆ ಪಕ್ಕದಲ್ಲಿ ೫ ಲಕ್ಷ ರೂ ವೆಚ್ಚದ ಕಿರುಸೇತುವೆ, ತೇಜಾಕ್ಷ ಕುಲಾಲ್ ಮನೆ ಬಳಿ ೫ ಲಕ್ಷ ರೂ ವೆಚ್ಚದ ಕಿರುಸೇತುವೆ ಹಾಗೂ ಗುರುನಾರಾಯಣ ಭಜನಾ ಮಂದಿರದ ಬಳಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯಕ್ಕೆ ಚಾಲನೆ ನೀಡಲಾಯಿತು.
ಜು.02ರಂದು ಶನಿವಾರ ನಡೆದ ಈ ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ ನಡಿಗುತ್ತು, ಸದಸ್ಯರಾದ ವಿಶ್ವನಾಥ ಶೆಟ್ಟಿ ಉಳಾಯಿಬೆಟ್ಟುಗುತ್ತು, ದಿನೇಶ್ ಕುಮಾರ್, ಮಾಜಿ ಸದಸ್ಯ ಕಮಲಾಕ್ಷ ತಲ್ಲಿಮಾರ್, ಗಂಗಾಧರ ಮಾಸ್ಟರ್, ಸ್ಥಳೀಯ ಮುಖಂಡರು, ಪಕ್ಷ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.