ಬಿ.ಸಿ.ರೋಡು: ಜೂ.೨ಎಲ್ಲೈಸಿ ಅಧಿಕಾರಿಗೆ ನಿವೃತ್ತಿ ಸಿಬ್ಬಂದಿಗಳಿಂದ ‘ಸುದರ್ಶನ ವಿಜಯ’ ಯಕ್ಷಗಾನ
ಬಂಟ್ವಾಳ: ದಾವಣಗೆರೆ ಮತ್ತು ಬಿ.ಸಿ.ರೋಡು ಭಾರತೀಯ ಜೀವ ವಿಮಾ ನಿಗಮ ಶಾಖೆಯಲ್ಲಿ ಕಳೆದ ಹಲವು ವರ್ಷಗಳಿಂದ ಅಭಿವೃದ್ಧಿ ಅಧಿಕಾರಿ ಮತ್ತು ಸಹಾಯಕ ಶಾಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಹಿರಿಯ ಅಧಿಕಾರಿ ಸುಂದರ ಮೇರ ಇವರು ಇದೇ ೩೦ರಂದು ನಿವೃತ್ತಿಗೊಳ್ಳಲಿದ್ದಾರೆ.
ಹಿರಿಯ ಶಾಖಾಧಿಕಾರಿ ನಾರಾಯಣ ಗೌಡ ಅಧ್ಯಕ್ಷತೆ ವಹಿಸಲಿದ್ದು, ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ರಾಜೇಶ್ ಮುದೋಳ್, ಮಾರುಕಟ್ಟೆ ಮೆನೇಜರ್ ರಮೇಶ ಭಟ್, ನಿವೃತ್ತ ಅಧಿಕಾರಿ ಸಿ.ಯು.ಚಂಗಪ್ಪ ಮತ್ತಿತರ ಗಣ್ಯರು ಭಾಗವಹಿಸುವರು.
ಇಲ್ಲಿನ ಎಲ್ಲೈಸಿ ಶಾಖೆ ಸೇರಿದಂತೆ ಕ್ರೀಡಾ ಮತ್ತು ಮನೋರಂಜನಾ ಸಂಘ ಹಾಗೂ ಪ್ರತಿನಿಧಿಗಳ ವತಿಯಿಂದ ಜೂ.೨ರಂದು ಗುರುವಾರ ಬೆಳಿಗ್ಗೆ ೯.೩೦ ಗಂಟೆಗೆ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಅವರಿಗೆ ‘ವಿದಾಯ ಕೂಟ’ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ ೨ ಗಂಟೆಗೆ ಸ್ಥಳೀಯ ಹವ್ಯಾಸಿ ಕಲಾವಿದರು ಸಹಿತ ಸಂಸ್ಥೆ ಸಿಬ್ಬಂದಿಗಳು ಮತ್ತು ಪ್ರತಿನಿಧಿಗಳಿಂದ ‘ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.