ಬಜಪೆ ಯುವವಾಹಿನಿ ಘಟಕದ ಸದಸ್ಯರಿಂದ ಪ್ರಥಮ ಭಜನಾ ಸೇವೆ
ಬಜಪೆ: ಯುವವಾಹಿನಿ (ರಿ) ಬಜಪೆ ಘಟಕವು ಈ ಸಾಲಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ತತ್ವವನ್ನು ಅನುಷ್ಠಾನಕ್ಕೆ ತರುವರೇ ಮನೆ-ಮನೆಗಳಲ್ಲಿ ಭಜನಾ ಸೇವೆಯನ್ನು ಆಯೋಜಿಸಲು ನಿರ್ಧರಿಸಿದೆ. ಯುವವಾಹಿನಿ ಘಟಕದ ಸದಸ್ಯರಿಂದ ಪ್ರಥಮ ಭಜನಾ ಸೇವೆಯು ಘಟಕದ ಸ್ಥಾಪಕ ಅಧ್ಯಕ್ಷರಾದ ಶ್ರೀಯುತ ವಿನೋದರ ಪೂಜಾರಿಯವರ ಮನೆಯಲ್ಲಿ ನೇರವೇರಿತು.
ಶ್ರೀ ಕ್ಷೇತ್ರ ಸುಂಕದಕಟ್ಟೆ ಮೊಕ್ತೇಸರ ನಾರಾಯಣ ಪೂಜಾರಿ ಅವರು ದೀಪ ಬೆಳಗಿಸುವುದರ ಮೂಲಕ ಭಜನಾ ಸೇವೆಗೆ ಚಾಲನೆ ನೀಡಿದರು. ಘಟಕದ ಅಧ್ಯಕ್ಷ್ಯೆ ಉಷಾ ಶಿವಾನಂದ್, ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕ ನಿರಂಜನ್ ಕರ್ಕೇರ ಹಾಗೂ ಮಾಜಿ ಅಧ್ಯಕ್ಷರುಗಳ ಮತ್ತು ಸದಸ್ಯರ ಉಪಸ್ಥಿತಿಯೊಂದಿಗೆ ಅತ್ಯಂತ ಅರ್ಥಪೂರ್ಣವಾಗಿ ನಡೆದ ಭಜನಾ ಸೇವೆಯು ಶ್ರೀ ಗುರುವರ್ಯರಿಗೆ ಪೂಜೆಯನ್ನು ನೆರವೇರಿಸಿ ಮಂಗಳ ಹಾಡಿನೊಂದಿಗೆ ಸಂಪನ್ನಗೊಂಡಿತು. ಶ್ರೀಯುತ ವಿನೋದರ ಪೂಜಾರಿ ಮತ್ತು ಮನೆಯವರು ಸದಸ್ಯರಿಗೆ ಊಟೋಪಚಾರದ ವ್ಯವಸ್ಥೆ ಮಾಡಿದ್ದರು.