ಬಂಟ್ವಾಳ: ಬಿ.ಸಿ.ರೋಡು ಪೇಟೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಮೇಲೆ ಮತ್ತು ಕೆಳಗೆ ಪಾದಚಾರಿಗಳಿಗೆ ಅಡ್ಡಿ ಉಂಟು ಮಾಡುತ್ತಿದ್ದ ಫ್ಲೆಕ್ಸ್ ಮತ್ತಿತರ ಭಿತ್ತಿಚಿತ್ರ ಅಳವಡಿಸುವುದನ್ನು ಪುರಸಭೆ ನಿಷೇಧಿಸಿದೆ. ಬಿ.ಸಿ.ರೋಡು ಮೇಲ್ಸೇತುವೆ ಬಳಿ ಛಿತ್ತಿಚಿತ್ರ ಮತ್ತು ಫ್ಲೆಕ್ಸ್ ಅಳವಡಿಸಿ ಪೇಟೆಯ ವಿರೂಪಗೊಳಿಸುವುದರ ಜೊತೆಗೆ ನಾಗರಿಕರಿಗೆ ತೊಂದರೆ ಉಂಟು ಮಾಡುತ್ತಿರುವ ಬಗ್ಗೆ ದೂರು ಕೇಳಿ ಬಂದಲ್ಲಿ ಪುರಸಭೆ ಸ್ವತ್ತಿಗೆ ಹಾನಿ ಮಾಡಿರುವ ಪ್ರಕರಣ ದಾಖಲಿಸಿ ದಂಡ ವಿಧಿಸುವುದಾಗಿ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
