ಬಂಟ್ವಾಳ ತಾ. ಅಮೆಚೂರ್ ಕಬಡ್ಡಿ ಎಸೋಸಿಯೇಶನ್: ವಿಶೇಷ ಸಭೆ
ಬಂಟ್ವಾಳ, : ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಎಸೋಸಿಯೇಶನ್‌ನ ವಿಶೇಷ ಸಭೆ ಬಿ.ಸಿ.ರೋಡ್ ರಾಜ್ಯ ಸರಕಾರಿ ನೌಕರರಸಂಘದ ಸಭಾಂಗಣದಲ್ಲಿ ನಡೆಯಿತು.
ಎಸೋಸಿಯೇಶನ್ ಅಧ್ಯಕ್ಷ ಬೇಬಿ ಕುಂದರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಜಿಲ್ಲಾ ಎಸೋಸಿಯೇಶನ್ ನಿಯಮಾವಳಿ ಪ್ರಕಾರ ಕಬಡ್ಡಿ ಪಂದ್ಯಾಟ ನಡೆಸಲಾಗುತ್ತಿದ್ದು, ಕಬಡ್ಡಿ ಸಂಘಟಕರು, ಆಟಗಾರರು ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಕಬಡ್ಡಿ ಪಂದ್ಯಾಟಗಳನ್ನು ಸುಲಲಿತವಾಗಿ ನಡೆಸಲು ತಾಲೂಕು ಆಟಗಾರರ ನೊಂದಾವಣೆ ಶಿಬಿರ ಜುಲೈ 10ರಂದು ರವಿವಾರ ಬೆಳಗ್ಗೆ 9.30ಕ್ಕೆ ಮೆಲ್ಕಾರ್ ಬಿರ್ವ ಸೆಂಟರ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಹೇಳಿದರು.
ಕಬಡ್ಡಿ ಶಿಸ್ತಿನ ಕ್ರೀಡೆಯಾಗಿದ್ದು, ಆಟಗಾರರು, ಸಂಘಟಕರು ಕಬಡ್ಡಿಯಲ್ಲಿ ಆಸಕ್ತಿ ವಹಿಸಿ, ಕ್ರೀಡೆಯ ಮೇಲಿನ ಗೌರವ ಉಳಿಸಬೇಕು. ಕಬಡ್ಡಿಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನಹೊಂದಿದ ಏಕಲವ್ಯ ಪ್ರಶಸ್ತಿ ಪುರಸ್ಕೃತ, ಎಸೋಸಿಯೇಶನ್ ಜಿಲ್ಲಾ ಸಮಿತಿ ಪ್ರ.ಕಾರ್ಯದರ್ಶಿಯಾಗಿದ್ದ ದಿ. ಉದಯ ಕುಮಾರ್ ಚೌಟ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬಂಟ್ವಾಳ ಕಬಡ್ಡಿ ಎಸೋಸಿಯೇಶನ್ ಪದಾಽಕಾರಿಗಳಾದ ಬಾಬು ಮಾಸ್ಟರ್ ತುಂಬೆ, ರವಿ ಅಂಚನ್, ಬಾಲಕೃಷ್ಣ ನರಿಕೊಂಬು, ಸೇಸಪ್ಪ ಮಾಸ್ಟರ್, ರತ್ನದೇವ್ ಪುಂಜಾಲಕಟ್ಟೆ, ತೀರ್ಪುಗಾರರ ಮಂಡಳಿ ಅಧ್ಯಕ್ಷ ಸುರೇಶ್ ಮೈರಡ್ಕ, ಎಸೋಸಿಯೇಶನ್ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಚಂದ್ರಶೇಖರ ಕರ್ಣ ಸ್ವಾಗತಿಸಿದರು