ಪೊಳಲಿ ಶ್ರೀರಾಜರಾಜೇಶ್ವರೀ ಸನ್ನಿಧಿಯಲ್ಲಿ ಅಪ್ಪದ ಪೂಜೆಯ ವಿಶೇಷತೆ

ಸುದ್ದಿ 9 ಕೈಕಂಬ:

ಪ್ರಸಿದ್ದ ಪುಣ್ಯ ಕ್ಷೇತ್ರ ಪೊಳಲಿ ಶ್ರೀರಾಜರಾಜೇಶ್ವರೀ ದೇವಳದಲ್ಲಿ ಕಾತರ್ಿಕ ಮಾಸದಲ್ಲಿ ನಡೆಯುವ ಅಪ್ಪದ ಪೂಜೆ ಬಹಳ ವಿಶೇಷ ಹಿಂದಿನ ಕಾಲದಲ್ಲಿ ಬರಗಾಲ ದಿಂದ ಕ್ರಷಿ ಚಟುವಟಿಕೆಗಳು ನಡೆಯದಿದ್ದಾಗ ಊರವರು ಗುತ್ತಿನವರು ಅರ್ಚಕರು ಸೇರಿ ಶ್ರೀದೇವಿಯಲ್ಲಿ ಪ್ರಾಥರ್ಿಸಿ ಕೃಷಿ ಭತ್ತಬೆಳೆ ಸರಿಯಾಗಿ ಬಂದರೆ ಬೆಳೆಯಲ್ಲಿ ಒಂದಂಶದಿಂದ ದೇವರಿಗೆ ಅಪ್ಪವನ್ನು ಮಾಡಿ ದೇವರಿಗೆ ಅಪರ್ಿಸುತ್ತೆವೆ ಎಂದು ಪ್ರಾರ್ಥನೆ ಮಾಡಿ ನಂತರ ಆ ಭಾಗದ ಕ್ರಷಿಕರು ಕ್ರಷಿ ಜಮೀನಿನಲ್ಲಿ ಭತ್ತದ ಬೆಳೆಗಳನ್ನು ಬೆಳೆಸುತ್ತಾರೆ. ಕ್ರಷಿ ಚೆನ್ನಾಗಿ ಬೆಳೆದು ಬಂದ ಭತ್ತದಿಂದ ಸಾವರ ಸೀಮೆಯ ಭಕ್ತರು ನೀಡಿದ ದೇಣಿಗೆಯಿಂದ ಅಪ್ಪದ ಪೂಜೆ ಮಾಡಲಾಗುತ್ತಿತ್ತು ಎಂದು ಪ್ರತೀತಿ .

ಪೊಳಲಿ ಕ್ಷೇತ್ರದ ಸಾವಿರ ಸೀಮೆಯ ಭಕ್ತರ ಸಮಸ್ತರ ಪಾಲ್ಗೋಲ್ಲುವಿಕೆಯಲ್ಲಿ ಅಪ್ಪದಸೇವೆಯು ನಡೆಯತ್ತ ಬಂದಿರುತ್ತದೆ. ಇಲ್ಲಿಯ ಅಪ್ಪದ ಸೇವೆಯು ಬಹಳ ಮಹತ್ವವಿದೆ,
ನ.7 ರಂದು ಶುಕ್ರವಾರ ಬೆಳಿಗ್ಗೆ ಶ್ರೀ ದೇವರ ಮಹಾಪೂಜೆಯ ಬಳಿಕ ದೇವರ ಬಲಿ ಉತ್ಸವ ನಡೆದು “ಏಕಾಹಭಜನೆ”ಪ್ರಾರಂಭಗೊಳ್ಳುತ್ತದೆ. ಭಜನೋತ್ಸವ ಮರುದಿನ ಬೆಳಗ್ಗಿನವರೇಗೆ ನಡೆಯುತ್ತದೆ.

ಶುಕ್ರವಾರ ಬೆಳಗ್ಗಿನ ಜಾವಾ ಅಪ್ಪ ತಯಾರಿಕೆಗೆ ಮೂಹೂರ್ತ ಮಾಡಿ 15ರಿಂದ 20 ಜನ ಬಟ್ಟರು ಅಪ್ಪ ತಯಾರು ಮಾಡಲು ಅನಿಯಾಗುತ್ತಾರೆ.

10ಕ್ವಿಂಟಾಲ್ ಬೆಳ್ತಿಗೆ ಅಕ್ಕಿಯಿಂದ ತಯಾರಾಗುವ ಅಪ್ಪ :
ಸುಮಾರು 10 ಕ್ವಿಂಟಾಲ್ ಬೆಳ್ತಿಗೆ ಅಕ್ಕಿಯಿಂದ 60 ಸಾವಿರದಿಂದ 70ಸಾವಿರದವರೇಗೆ ಅಪ್ಪವನ್ನು ತಯಾರಿಸಿ ಪ್ರಶಾದ ರೂಪವಾಗಿ ಭಕ್ತರಿಗೆ ನೀಡುತ್ತಾರೆ. 10ಕ್ವಿಂಟಾಲ್ಬೆಳ್ತಿಗೆ ಅಕ್ಕಿ 4ಕ್ವಿಂಟಾಲ್ ಗೋಧಿ ಹುಡಿ ಇದಕ್ಕೆ 140 ಲೀಟರ್ ನಂದಿನಿ ತುಪ್ಪ, 600 ತೆಂಗಿನಕಾಯಿ,

ಅಪ್ಪದ ಕಾವಳಿ:

ಗಂಜಿಮಠ ಮಹಾಗಣಪತಿ ದೇವಸ್ತಾನ ಹಾಗೂ ಕೊಡ್ಯಡ್ಕ ಅನ್ನಪೂಣರ್ೇಶ್ವರಿ ದೇವಸ್ಥಾನದಿಂದ ಕಾವಳಿಗಳನ್ನು ಉಪಯೋಗಿಸುತ್ತಾರೆ. ಅಪ್ಪ ತಯಾರಿಕೆಗೆ ನಡೆದು ಬಂದ ಪ್ರಕ್ರೀಯೆ.ಶುಕ್ರವಾರದಂದು ರಾತ್ರಿ ದೇವಳದ ಅರ್ಚಕರು ಹಾಗೂ ಗುತ್ತಿನವರಹಾಗೂ ಊರವರ ಸಮಕ್ಷಮದಲ್ಲಿ ವಾದ್ಯ ಗೋಷ್ಟಿಯೊಂದಿಗೆ ಶ್ರೀ ದೇವಿಗೆ ಅಪ್ಪವನ್ನು ಸಮಪರ್ಿಸಿ ಪೂಜಾವಿಧಿವಿಧಾನಗಳನ್ನು ನೆರವೇರಿಸಿ ಮಹಾಪೂಜೆಯ ಬಳಿಕ ಅಪ್ಪಗಳನ್ನು ಭಕ್ತಾಧಿಗಳ ನೆರವಿನಿಂದ ಲಕೋಟೆಯಲ್ಲಿ ಹಾಕಿ ಪ್ಯಾಕ್ ಮಾಡಲಾಗುತ್ತದೆ.

ಸಾವಿರ ಸೀಮೆಗೆ ಸಂಭಂದ ಪಟ್ಟ ಭಕ್ತಾಧಿಗಳು ಅಪ್ಪದ ಪೂಜೆಗೆ ಕಾಣಕೆ, ವಂತಿಗೆ ರೂಪದಲ್ಲಿ ಹಣ ನೀಡಿ ಅಪ್ಪವನ್ನು ಸ್ವಿಕರಿಸುತ್ತಾರೆ.
ಈ ಬಾರಿ ಭಕ್ತಾಧಿಗಳಿಗೆ 1ಅಪ್ಪದ ಲಕೋಟೆಗೆ 50 ರೂ. ನಿಗದಿ ಮಾಡಲಾಗಿದೆ. 1ಲಕೋಟೆಯಲ್ಲಿ 7 ಅಪ್ಪಗಳನ್ನು ಹಾಕಿ ಪ್ಯಾಕ್ಮಾಡಿ ನೀಡಲಾಗುತ್ತದೆ.

ದೇವರ ಬಲಿ ಹೊರಡುವುದು. 
ದೇವರ ಬಲಿ ಉತ್ಸವ ನಡೆದು ಅನಂತರ ದೇವರು ಗರ್ಭಗುಡಿಗೆ ಹೊದನಂತರ ಅಪ್ಪದ ಪ್ರಸಾದವನ್ನು ನೆರೆದಿದ್ದ ಭಕ್ತರಿಗೆ ನೀಡುತ್ತಾರೆ.ನಂತರ ರಸೀದಿ ಮಾಡಿದ ಭಕ್ತರು ಬಹಳ ಉತ್ಸಾಹದಿಂದ ಅಪ್ಪ ಸ್ವಿಕರಿಸಲು ಕಾದು ಕಳಿತು ರಾತ್ರಿಯೇ ಅಪ್ಪದ ಪ್ರಸಾದವನ್ನು ತೆಗೆದುಕೊಂಡು ಹೋಗುತ್ತಾರೆ

 

_1

_2

1 (1)

1 (3)

1 (4)

1 (5)

 

 

 

By Suddi9 Author

Suddi9

Leave a Reply

Your email address will not be published. Required fields are marked *