ನವದೆಹಲಿ: ಮನೆಯ ಛಾವಣಿ ಮೇಲೆ ಐದು ವರ್ಷದ ಬಾಲಕಿಯ ಕೈಗಳನ್ನು ಆಕೆಯ ತಾಯಿಯೇ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

crime

ಬಾಲಕಿಗೆ ಕಿರುಕುಳ ನೀಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ, ಪೊಲೀಸರು ಬಾಲಕಿಯ ಕುಟುಂಬಸ್ಥರನ್ನು ಪತ್ತೆ ಹಚ್ಚಿದ್ದಾರೆ. ನಂತರ ಈ ಕುರಿತಂತೆ ತನಿಖೆ ನಡೆಸಿದಾಗ ಆಕೆಯ ತಾಯಿಯೇ ಶಿಕ್ಷೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

police (1)

ಈ ಘಟನೆ ಖಜೂರಿ ಖಾಸ್ ಪ್ರದೇಶದಲ್ಲಿ ನಡೆದಿದ್ದು, ಈ ಘಟನೆ ಸಂಬಂಧ ಮಹಿಳೆಯನ್ನು ಪ್ರಶ್ನಿಸಿದ ಪೊಲೀಸರಿಗೆ, ತನ್ನ ಮಗಳು ಶಾಲೆಯ ಹೋಂ ವರ್ಕ್‍ನನ್ನು ಪೂರ್ಣಗೊಳಿಸದಿದ್ದಕ್ಕಾಗಿ ಕೇವಲ 5-7 ನಿಮಿಷಗಳ ಕಾಲ ಶಿಕ್ಷಿಸಿರುವುದಾಗಿ ಮಹಿಳೆ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *